*ಊರಿನ ಹೆಮ್ಮೆಯ ಸಂಘ ಯುವಕ ಮಂಡಲ (ರಿ.), ಇರಾ*
ಇರಾ: ಯುವಕ ಮಂಡಲ(ರಿ.), ಇರಾ ಸಾಮಾಜಿಕ ಕಳಕಳಿಯೊಂದಿಗೆ 1973ರಲ್ಲಿ ಉದಯಗೊಂಡು, 1976ರಲ್ಲಿ ನೊಂದಾವಣೆಗೊಂಡು ಸರಕಾರದ ಅಂಗೀಕೃತ ಸಂಸ್ಥೆಯಾಯಿತು. ಈ ಸಂಘವು ಜಾತ್ಯಾತೀತವಾಗಿದ್ದು 100 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಸದಾ ಸಾಮರಸ್ಯದಿಂದ ಕೂಡಿದ, ಸಮಾನ ಮನಸ್ಥಿತಿಯ ಸದಸ್ಯರು ತಿಂಗಳಿಗೊಮ್ಮೆ ಸಭೆ ಸೇರಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕೆಲಸಗಳ ಬಗ್ಗೆ ಚರ್ಚಿಸಿ, ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿರುತ್ತಾರೆ. ಹಾಗೆಯೇ ಊರಿನಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ ಜನಮನ್ನಣೆಗಳಿಸಿರುತ್ತಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಧನ ಸಹಾಯದ ಜತೆಗೆ, ಊರಿನ ಮಕ್ಕಳಿಗೆ ಹಾಗು ಯುವಕರಿಗೆ ವರ್ಷಂಪ್ರತಿ ಕ್ರೀಡಾಸ್ಪರ್ಧೆಗಳನ್ನು ನಡೆಸಿ ಅವರ ಪ್ರತಿಭೆಗಳಿಗೆ ಈ ಸಂಘವು ವೇದಿಕೆ ನಿರ್ಮಿಸಿದೆ. ಅಷ್ಟೇ ಅಲ್ಲದೆ ಪ್ರತೀ ವರ್ಷ ವಾರ್ಷಿಕೋತ್ಸವದ ಅಂಗವಾಗಿ ಮಂಗಳೂರಿನ ಪ್ರಖ್ಯಾತ ನಾಟಕ ತಂಡದಿಂದ ಸಾಮಾಜಿಕ ನಾಟಕವನ್ನು, ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ ಯಕ್ಷಗಾನ ಬಯಲಾಟವನ್ನು ಆಯೋಜಿಸಿ ಕಲಾ ಪೋಷಣೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ನಮ್ಮ ಸಂಘದಲ್ಲಿ ಸ್ವತಃ ಕಲಾವಿದರಾದ ಹಲವು ಸದಸ್ಯರಿದ್ದು ಇರಾ ದೇವಳದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಹಿರಿಯ ಸದಸ್ಯರ ಮಾರ್ಗದರ್ಶನ ಜತೆಗೆ ತಾವೇ ಅಭಿನಯಿಸಿ ನಾಟಕ ಮಾಡುವದರ ಮೂಲಕ ಕಲಾಸೇವೆಯನ್ನು ಮಾಡಿರುತ್ತಾರೆ. ಸಂಘದ ಯಾವುದೇ ಸದಸ್ಯರ ಮನೆಯಲ್ಲಿನ ಶುಭ ಸಮಾರಂಭಗಳಿಗೆ ತೆರಳಿ ಶ್ರಮದಾನ ಮಾಡುವುದರ ಮೂಲಕ ಅವರ ಪ್ರೀತಿಗಳಿಸಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಧ್ಯೇಯವಾಕ್ಯದಂತೆ ಕಾರ್ಯ ನಿರ್ವಹಿಸಿ ಊರಿನ ಹೆಮ್ಮೆಯ ಸಂಘವಾಗಿದೆ…
✍🏼 *ಅಶ್ವಿತ್ ಕೊಟ್ಟಾರಿ, ಇರಾ*