ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ‌ ಮಂಡಲದ‌ 49ನೇ ವಾರ್ಷಿಕೋತ್ಸವದ ಕರೆಯೋಲೆ

ಆತ್ಮೀಯರೇ

ಇದೇ ಬರುವ ತಾರೀಖು 25-12-2022 ರ ಭಾನುವಾರ ಯುವಕ ಮಂಡಲ ( ರಿ.) ಇರಾ ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು, ಸಂಜೆ 3.30 ಗಂಟೆಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಯುವಕ ಮಂಡಲದವರೆಗೆ ಮೇಳದ ದೇವರ ಭವ್ಯವಾದ ಮೆರವಣಿಗೆಯು ಸಾಗಲಿದ್ದು, ನಂತರ ಯುವಕ ಮಂಡಲದ ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಂತರ 5.30 ಕ್ಕೆ ಸರಿಯಾಗಿ ಚೌಕಿ ಪೂಜೆ , ಪ್ರಸಾದ ವಿತರಣೆ, 8.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿ ತನು-ಮನ-ಧನ ಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.

ಅಶ್ವಿತ್ ಕೊಟ್ಟಾರಿ
ಅಧ್ಯಕ್ಷರು
ಯುವಕ ಮಂಡಲ(ರಿ.) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಉಚಿತ ವೈದ್ಯಕೀಯ ಶಿಬಿರ

ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ (ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ ಹಾಗು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಕುಂಡಾವು, ಇರಾ ಗ್ರಾಮ ಪಂಚಾಯತ್, ಯುವಕ ಮಂಡಲ(ರಿ.) ಇರಾ ಇವರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಹಾಗು ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ದಿನಾಂಕ 23-10-2022 ಆದಿತ್ಯವಾರ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಇರಾ ಇಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರರಾದ ಶ್ರೀ ವೈ.ಬಿ ಸುಂದರ್, ಇರಾ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ರೂ, ಹಾಲಿ ಸದಸ್ಯರೂ ಆದ ಶ್ರೀ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ನ ಹಾಗು ಯುವಕ ಮಂಡಲದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸತ್ಯಸಾಯಿ ಸೇವಾ ಸಂಸ್ಥೆ ಯ ರಾಜ್ಯ ಪದಾಧಿಕಾರಿಗಳಾದ ಶ್ರೀ ಚಂದ್ರಶೇಖರ್ ನಾಯಕ್, ಶ್ರೀ ನಿರಂಜನ್ ಹೆಬ್ಬಾರ್, ಕಲ್ಲಾಡಿ ವಿಠ್ಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾದ ಶ್ರೀ ಜಯರಾಮ್ ಪೂಜಾರಿ ಸೂತ್ರಬೈಲು, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಮೊಯ್ದಿನ್ ಕುಂಞ, ಇರಾ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೋನಿತ, ಅಧ್ಯಾಪಕರಾದ ಶ್ರೀ ಮಹಮ್ಮದ್, ಯುವಕ ಮಂಡಲ(ರಿ.) ಇರಾ ಇದರ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ, ಯನೆಪೊಯ ವೈದ್ಯಕೀಯ ಸಂಸ್ಥೆಯ ಡಾ| ಅಫ್ರೀನವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯಸಾಯಿ ಸೇವಾ ಟ್ರಸ್ಟ್ ನ ಸದಸ್ಯರಾದ ಶ್ರೀ ದೇವಾನಂದ ರೈ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ ಪುನರಾಯ್ಕೆ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ದಿನಾಂಕ 28-08-2022 ರಂದು ಇರಾ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವಾರ್ಷಿಕ ಆಯವ್ಯಯಗಳನ್ನು ಮಂಡಿಸಲಾಯಿತು. ನಂತರ 2022-23 ಅವಧಿಗೆ ನೂತನ ಸದಸ್ಯರನ್ನು ಒಮ್ಮತದಿಂದ ಆಯ್ಕೆ‌ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮಂಜುನಾಥ ಡಿ ಶೆಟ್ಟಿ, ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ, ಉಪಾಧ್ಯಕ್ಷರಾಗಿ ಭರತರಾಜ್ ರೈ, ಕಾರ್ಯದರ್ಶಿಗಳಾಗಿ ಚರಣ್ ಪಕ್ಕಳ ಮತ್ತು ದೇವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ನಿತೇಶ್ ಶೆಟ್ಟಿ ಮತ್ತು ವಿನೋದ್ ಕೆಂಜಿಲಾ, ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ್ ರೈ, ಖಜಾಂಚಿಯಾಗಿ ಜಗದೀಶ್ ನಾಯರ್ ಕೋಡಿ ಮತ್ತಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಜ್ರಾಕ್ಷ ಟಿ. ಈ ಸಂದರ್ಭದಲ್ಲಿ ಭಜನಾ‌ ಮಂಡಳಿಯ‌ ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿಯ‌ ಕ್ರೀಡಾ ಕೂಟ

ಯುವಕ‌ ಮಂಡಲ (ರಿ.) ಇರಾ ಇದರ ವತಿಯಿಂದ‌ ನಡೆದ 49 ನೇ‌ ವರ್ಷದ ಕ್ರೀಡಾ ಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು.‌ ಮಕ್ಕಳಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಗು ತೀರ್ಪುಗಾರರಾಗಿ ಭಾಗವಹಿಸಿದ ಶ್ರೀ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ‌ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ, ಶ್ರೀ ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಶ್ರೀ ಹಬೀಬ್ ರಹಿಮಾನ್ , ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಹಾಗು ಯುವಕ ಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗು ವರದರಾಜ‌ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವರ ಹಾಗು ಅರಸು ಶ್ರೀ ಕುರಿಯಾಡಿತ್ತಾಯಿ ಮೂವರು ದೈವಂಗಳ ಜಾತ್ರಾ ಮಹೋತ್ಸವದ ವಿವರ

ಇರಾ ಶ್ರೀ ಸೋಮನಾಥೇಶ್ವರ ದೇವರ ಹಾಗು ಅರಸು ಶ್ರೀ ಕುರಿಯಾಡಿತ್ತಾಯಿ ಮೂವರು ದೈವಂಗಳ ಜಾತ್ರಾ ಮಹೋತ್ಸವದ ವೇಳಾಪಟ್ಟಿಯನ್ನು ಇರಾ ಶ್ರೀ ಸೋಮನಾಥೇಶ್ವರ ದೇವರ ಸನ್ನಿದಾನದಲ್ಲಿ ಊರವರ ಉಪಸ್ಥಿತಿಯಲ್ಲಿ ಬಡಾಜೆ ತಂತ್ರಿಗಳು ಬಿಡುಗಡೆಗೊಳಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ ಆಯ್ಕೆ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ (ರಿ) ಇರಾ ಇದರ ವಾರ್ಷಿಕ ಮಹಾ ಸಭೆ ದಿನಾಂಕ 23-08-2020 ರಂದು ಇರಾ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವಾರ್ಷಿಕ ಆಯವ್ಯಯಗಳನ್ನು ಮಂಡಿಸಲಾಯಿತು. ನಂತರ 2020-21 ಅವಧಿಗೆ ನೂತನ ಸದಸ್ಯರನ್ನು ಒಮ್ಮತದಿಂದ ಆಯ್ಕೆ‌ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮಂಜುನಾಥ ಡಿ ಶೆಟ್ಟಿ, ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ, ಉಪಾಧ್ಯಕ್ಷರಾಗಿ ಭರತರಾಜ್ ರೈ, ಕಾರ್ಯದರ್ಶಿಗಳಾಗಿ ಚರಣ್ ಪಕ್ಕಳ ಮತ್ತು ದೇವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ನಿತೇಶ್ ಶೆಟ್ಟಿ ಮತ್ತು ವಿನೋದ್ ಕೆಂಜಿಲಾ, ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ್ ರೈ, ಖಜಾಂಚಿಯಾಗಿ ಜಗದೀಶ್ ನಾಯರ್ ಕೋಡಿ ಮತ್ತಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಜ್ರಾಕ್ಷ ಟಿ. ಈ ಸಂದರ್ಭದಲ್ಲಿ ಭಜನಾ‌ ಮಂಡಳಿಯ‌ ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಇರಾ ಇದರ ಅಧ್ಯಕ್ಷ ರಾಗಿ ಜಯರಾಮ್ ಪೂಜಾರಿ ಆಯ್ಕೆ

ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್(ರಿ.) ಇರಾ ಇದರ ವಾರ್ಷಿಕ ಮಹಾ ಸಭೆ ದಿನಾಂಕ 20-09-2020ರಂದು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ‌ ನಡೆಯಿತು. ಸಭೆಯಲ್ಲಿ ಟ್ರಸ್ಟ್ ನ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ನಂತರ ನಡೆದ ನೂತನ‌ ಪದಾಧಿಕಾರಿಗಳ ಆಯ್ಕೆಯಲ್ಲಿ ,ಟ್ರಸ್ಟ್ ನ ಗೌರವಾಧ್ಯಕ್ಷರಾಗಿ ಶ್ರೀ ದೇವಿ ಪ್ರಸಾದ್ ಶೆಟ್ಟಿ ಕಲ್ಲಾಡಿ , ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಶ್ರೀ ಜಯರಾಮ್ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿಯಾಗಿ ಶ್ರೀ ಗಣೇಶ್ ಕೊಟ್ಟಾರಿ ಸಂಪಿಲ ಹಾಗು ಕೋಶಾಧಿಕಾರಿಯಾಗಿ ಶ್ರೀ ಪುಷ್ಪರಾಜ್ ಕುಕ್ಕಾಜೆ ಅವಿರೋಧವಾಗಿ ಆಯ್ಕೆಯಾದರು. ನಂತರ‌ ಟ್ರಸ್ಟ್ ನ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸಭೆಯಲ್ಲಿ ನಿರ್ಣಾಯಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಸರ್ವರಿಗೂ ಗೌರೀ ಗಣೇಶ ಹಬ್ಬದ ಶುಭಾಶಯಗಳು

*ಆತ್ಮೀಯರೇ, ಪ್ರತಿ ವರ್ಷ ನಮ್ಮ ಯುವಕ ಮಂಡಲದ ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ನಾವು ವಿವಿಧ ಕಾರ್ಯಕ್ರಮಗಳ ಜತೆಗೆ ಯಕ್ಷಗಾನ ಬಯಲಾಟವನ್ನು ಅಧ್ಧೂರಿಯಾಗಿ ಆಯೋಜಿಸಿಕೊಂಡು ಬಂದಿರುತ್ತೇವೆ. ಆದರೇ ಜಗತ್ತಿಗೆ ಸಂಕಷ್ಟ ತಂದೊಡ್ಡಿದ ಕೊರೋನಾದಿಂದ ಈ ವರ್ಷ ಕಾರ್ಯಕ್ರಮ ‌ನಡೆಸಲು ಅನಾನುಕೂಲವಾಗಿದ್ದು, ಪ್ರತೀ ವರ್ಷ ನಮ್ಮ ಕಾರ್ಯಕ್ರಮಗಳಿಗೆ‌ ತುಂಬು ಹೃದಯದ ಸಹಕಾರ, ಪ್ರೋತ್ಸಾಹ ನೀಡಿರುವ ಸಹೃದಯಿಗಳಾದ ತಮ್ಮೆಲ್ಲರಿಗೂ ಗೌರೀ ಗಣೇಶ ಹಬ್ಬದ ಶುಭಾಶಯಗಳು. ಭಗವಾನ್ ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು, ಆರೋಗ್ಯ ವನ್ನು ದಯ ಪಾಲಿಸಲಿ. ನಿಮ್ಮೆಲ್ಲರ ಸಹಕಾರ ಹೀಗೆ ನಮ್ಮ ಮೇಲಿರಲಿ ಎಂದು‌ ಅಶಿಸುವ.*

*ಯುವಕ ‌ಮಂಡಲ(ರಿ.) ಇರಾ*

Ganesha_Panchamukha[1]


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲದ ವಠಾರದಲ್ಲಿ ನಡೆದ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಯುವಕ ‌ಮಂಡಲ(ರಿ.) ಇರಾ ಇದರ ವಠಾರದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ,ಸರಕಾರದ ಮಾರ್ಗ ಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಚರಿಸಲಾಯಿತು.‌ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸೀನ್ ಶೆಟ್ಟಿ ಆಚೆಬೈಲು ಧ್ವಜಾರೋಹಣ ನೆರವೇರಿಸಿದರು. ಸಂಘದ ಹಿತೈಶಿಗಳಾದ ಶ್ರೀ ಗೋಪಾಲ ಅಶ್ವತ್ಥಡಿ ಕಾರ್ಯಕ್ರಮ ನಿರೂಪಿಸಿದರು, ಹಾಗು ಸಂಘದ ಸದಸ್ಯ ವರದರಾಜ ಎಂ ವಂದಿಸಿದರು. ಈ ಸಮಯದಲ್ಲಿ ಸಂಘದ ಹಿರಿಯ‌ ಸದಸ್ಯರಾದ ಗಣೇಶ್ ಕೊಟ್ಟಾರಿ ಸಂಪಿಲ, ಯತಿರಾಜ ಶೆಟ್ಟಿ ಸಂಪಿಲ, ವಾಮನ ಪೂಜಾರಿ ಟಿ, ಐತಪ್ಪ ಪೂಜಾರಿ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.

IMG-20200815-WA0008IMG-20200815-WA0010IMG-20200815-WA0013IMG-20200815-WA0012IMG-20200815-WA0009


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷ ವಾಙ್ಮಯಿ, ಅಭಿನಯ ಚಕ್ರವರ್ತಿ ಪುಷ್ಪರಾಜ್ ಕುಕ್ಕಾಜೆ

ಪುಷ್ಪರಾಜ್ ಕುಕ್ಕಾಜೆ ಹವ್ಯಾಸಿ ಯಕ್ಷಗಾನ ಕಲಾವಿದರಲ್ಲಿ ಮೇರುಪಂಕ್ತಿಯ ಕಲಾವಿದರು. 1954 ರಲ್ಲಿ ಸ್ಥಾಪಿತವಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದವರು ಇತ್ತೀಚೆಗೆ ನಡೆಸಿದ ಯಕ್ಷ ವಾಙ್ಮಯ 2020 ಸ್ಪರ್ಧೆಯಲ್ಲಿ ,61 ಸ್ಪರ್ದಿಗಳೆದುರು ಪ್ರಥಮ ಸ್ಥಾನ ಪಡೆದ ಪುಷ್ಪರಾಜರು ಕುಕ್ಕಾಜೆಯ ಹೆಮ್ಮೆ. ಇವರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದರು ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಮೇರಾವು ಮಹಾಬಲ ರೈಗಳು,ನಾಟ್ಯ ಕಲಿಸಿದವರು ಕಲಾವಿದರಾದ ಶ್ರೀಧರ ಪಂಜಾಜೆ ಇವರು. ಶ್ರೀ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಹಾಗು ಶ್ರೀ ದೂಮಣ್ಣ ರೈ ಕುಕ್ಕಾಜೆ ಇವರ ತಾಳಮದ್ದಳೆ ಗುರುಗಳಾಗಿದ್ದಾರೆ. 1993ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂಧರ್ಭದಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ 77 ಸ್ಪರ್ದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಇವರ ಪ್ರೌಢಿಮೆಗೆ ಸಾಕ್ಷಿ. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಯಕ್ಷಗಾನ ಸಂಘಟಕರಾಗಿಯೂ, ಕಾರ್ಯಕ್ರಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ಹವ್ಯಾಸಿ ಯಕ್ಷಗಾನ ರಂಗದಲ್ಲಿ 37 ವರ್ಷದ ಸಾರ್ಥಕ ಸೇವೆ ಸಲ್ಲಿಸಿದ್ದು, ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಮಾರ್ಗದರ್ಶಕರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದಾರೆ.ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಇವರ ಸಾಧನೆ ಅಪರಿಮಿತವಾದದ್ದು. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಮಾಜ ಸೇವೆ ಹಾಗು ಕಲಾ ಸೇವೆ ಮಾಡುತ್ತಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಇವರಿಗೆ ಇರಾ ಯುವಕ ಮಂಡಲದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

 

2cbfd889ca8047629f3537604efa9cdfFB_IMG_1594634045394