ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿಯ‌ ಕ್ರೀಡಾ ಕೂಟ

ಯುವಕ‌ ಮಂಡಲ (ರಿ.) ಇರಾ ಇದರ ವತಿಯಿಂದ‌ ನಡೆದ 49 ನೇ‌ ವರ್ಷದ ಕ್ರೀಡಾ ಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು.‌ ಮಕ್ಕಳಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಗು ತೀರ್ಪುಗಾರರಾಗಿ ಭಾಗವಹಿಸಿದ ಶ್ರೀ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ‌ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ, ಶ್ರೀ ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಶ್ರೀ ಹಬೀಬ್ ರಹಿಮಾನ್ , ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಹಾಗು ಯುವಕ ಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗು ವರದರಾಜ‌ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷ ವಾಙ್ಮಯಿ, ಅಭಿನಯ ಚಕ್ರವರ್ತಿ ಪುಷ್ಪರಾಜ್ ಕುಕ್ಕಾಜೆ

ಪುಷ್ಪರಾಜ್ ಕುಕ್ಕಾಜೆ ಹವ್ಯಾಸಿ ಯಕ್ಷಗಾನ ಕಲಾವಿದರಲ್ಲಿ ಮೇರುಪಂಕ್ತಿಯ ಕಲಾವಿದರು. 1954 ರಲ್ಲಿ ಸ್ಥಾಪಿತವಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದವರು ಇತ್ತೀಚೆಗೆ ನಡೆಸಿದ ಯಕ್ಷ ವಾಙ್ಮಯ 2020 ಸ್ಪರ್ಧೆಯಲ್ಲಿ ,61 ಸ್ಪರ್ದಿಗಳೆದುರು ಪ್ರಥಮ ಸ್ಥಾನ ಪಡೆದ ಪುಷ್ಪರಾಜರು ಕುಕ್ಕಾಜೆಯ ಹೆಮ್ಮೆ. ಇವರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದರು ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಮೇರಾವು ಮಹಾಬಲ ರೈಗಳು,ನಾಟ್ಯ ಕಲಿಸಿದವರು ಕಲಾವಿದರಾದ ಶ್ರೀಧರ ಪಂಜಾಜೆ ಇವರು. ಶ್ರೀ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಹಾಗು ಶ್ರೀ ದೂಮಣ್ಣ ರೈ ಕುಕ್ಕಾಜೆ ಇವರ ತಾಳಮದ್ದಳೆ ಗುರುಗಳಾಗಿದ್ದಾರೆ. 1993ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂಧರ್ಭದಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ 77 ಸ್ಪರ್ದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಇವರ ಪ್ರೌಢಿಮೆಗೆ ಸಾಕ್ಷಿ. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಯಕ್ಷಗಾನ ಸಂಘಟಕರಾಗಿಯೂ, ಕಾರ್ಯಕ್ರಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ಹವ್ಯಾಸಿ ಯಕ್ಷಗಾನ ರಂಗದಲ್ಲಿ 37 ವರ್ಷದ ಸಾರ್ಥಕ ಸೇವೆ ಸಲ್ಲಿಸಿದ್ದು, ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಮಾರ್ಗದರ್ಶಕರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದಾರೆ.ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಇವರ ಸಾಧನೆ ಅಪರಿಮಿತವಾದದ್ದು. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಮಾಜ ಸೇವೆ ಹಾಗು ಕಲಾ ಸೇವೆ ಮಾಡುತ್ತಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಇವರಿಗೆ ಇರಾ ಯುವಕ ಮಂಡಲದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

 

2cbfd889ca8047629f3537604efa9cdfFB_IMG_1594634045394


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿ

ಯುವಕ‌ ಮಂಡಲ(ರಿ.) ಇರಾ ಇದರ ವತಿಯಿಂದ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಗಣೇಶ ಚತುರ್ಥಿಯ ಅಂಗವಾಗಿ ಇರಾ ಶಾಲಾ ಮಕ್ಕಳಿಗೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಊರಿನ ಯುವಕರಿಗೆ ವಾಲಿಬಾಲ್ ,ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾಸಕ್ತ ಯುವಕರನ್ನು ಪ್ರೋತ್ಸಾಹಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ನಮ್ಮ ಗ್ರಾಮದ ಪ್ರಥಮ ಪ್ರಜೆ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ , ನಮ್ಮ ಸಂಘದ ಸದಸ್ಯರೂ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿ ಸಂಪಿಲ, ಗೋಪಾಲ ಅಶ್ವತ್ಥಡಿ, ಸಂಘದ ಹಿರಿಯ ಸದಸ್ಯರಾದ ಯತಿರಾಜ್ ಶೆಟ್ಟಿ, ಸುರೇಶ್  ಕೊಟ್ಟಾರಿ, ಸುರೇಶ್ ರೈ, ವಾಮನ ಪೂಜಾರಿ ಬಹುಮಾನ ವಿತರಿಸಿದರು. ಕೊನೆಗೆ‌ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದ ಗ್ರಾಮ‌‌ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಯುವಕ‌ ಮಂಡಲದ ಕಾರ್ಯ ಚಟುವಟಿಕೆಗಳ ಶ್ಲಾಘಿಸಿದರು. ಸಂಘದ ಕಾರ್ಯದರ್ಶಿ ನಿತೇಶ್ ಶೆಟ್ಟಿ, ನಿಶಾನ್ ಕೊಟ್ಟಾರಿ ಕಾರ್ಯಕ್ರಮ‌ ನಿರೂಪಿಸಿದರು. ಅಧ್ಯಕ್ಷ ಚರಣ್ ಪಕ್ಕಳ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ವರದರಾಜ್ ವಂದಿಸಿದರು.‌ ಸಂಘದ ಎಲ್ಲಾ ಪಧಾದಿಕಾರಿಗಳು, ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.

IMG_20190902_103139IMG_20190902_103212IMG_20190902_105935IMG_20190902_105949IMG-20190902-WA0090IMG-20190902-WA0086IMG-20190902-WA0085IMG-20190902-WA0091IMG-20190902-WA0078IMG-20190902-WA0080


ನಿಮ್ಮ ಟಿಪ್ಪಣಿ ಬರೆಯಿರಿ

ತುಳು ರಂಗಭೂಮಿಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ನಿತೇಶ್ ಶೆಟ್ಟಿ

ಇರಾ ಯುವಕ ಮಂಡಲ ಹಲವು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು, ಕಲಾ ಪೋಷಣೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇಂದು ನಮ್ಮ ಸಂಘದ ಯುವ ಸದಸ್ಯ ನಿತೇಶ್ ಶೆಟ್ಟಿ ಸಂಪಿಲ , ತುಳುನಾಡಿನ ಹೆಸರಾಂತ ನಾಟಕ ತಂಡವಾದ ಲಯನ್ ಡಿ ಕಿಶೋರ್ ಶೆಟ್ಟಿಯವರ ಶ್ರೀ ಲಲಿತೆ  ತಂಡದ ಕಲಾವಿದನಾಗಿ ಸೇರ್ಪಡೆಗೊಂಡು ಕಲಾ ಸೇವೆಯಲ್ಲಿ ತೊಡಗಿರುವುದು ನಮಗೆ ಹೆಮ್ಮೆಯ ಸಂಗತಿ. ಅವರ ಕಲಾ ಜಗತ್ತಿನ ಪಯಣ ಹೀಗೆ ಮುಂದುವರಿಯಲಿ ಹಾಗು ಅವರ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುವ ಯುವಕ ಮಂಡಲ(ರಿ.) ಇರಾ

IMG-20180918-WA0000IMG-20180918-WA0001


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷರಂಗದ ಭರವಸೆಯ ಬಹುಮುಖ ಪ್ರತಿಭೆ ಮನ್ವಿತ್

ಇರಾ ಗ್ರಾಮವು ಹಲವು  ಪ್ರತಿಭೆಗಳ ಆಗರ,ಇದಕ್ಕೆ ಸಾಕ್ಷಿಯೆಂಬಂತೆ ನಾವು ಹಲವು ಯುವ ಪ್ರತಿಭೆಗಳನ್ನು ನಮ್ಮೂರಲ್ಲಿ ಕಾಣಬಹುದು. ಈ ಯುವ ಪ್ರತಿಭೆಗಳು ನಮ್ಮ ಯುವಕ ಮಂಡಲದ ಸದಸ್ಯರು ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ.

ಇಂತಹ ಯುವ ಪ್ರತಿಭೆಯಲ್ಲಿ ಇರಾ ಸಂಪಿಲದ ಮನ್ವಿತ್ ವೈ ಶೆಟ್ಟಿ ಒಬ್ಬರು. ದ.ಕ ಗಂಡುಕಲೆ ಯಕ್ಷಗಾನವನ್ನು  ತನ್ನ ಅಭಿರುಚಿ ಮಾಡಿಕೊಂಡು ಯಕ್ಷ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ.

ಇವರು ಮಾಯಾ ಶೂರ್ಪಣಖ ಎಂಬ ಸ್ತ್ರೀ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದಿನಿಂದ ಇಂದಿನವರೆಗೆ  ಹಲವಾರು ಸ್ತ್ರೀ ಪುರುಷ ಪಾತ್ರಗಳಿಗೆ ಜೀವ ತುಂಬಿ ತಾನು ಒಬ್ಬ ಅಪ್ರತಿಮ ಕಲಾವಿದ ಎಂಬುದನ್ನು ನಿರೂಪಿದಿದ್ದಾರೆ.

ಮೊದಲು ತನ್ನ ಸ್ನೇಹಿತರಾದ ಗೌರವ್ , ಸಾರ್ಥಕ್, ಆದರ್ಶ್ ರಿಂದ ಯಕ್ಷಗಾನದ ಆಯಾಮಗಳನ್ನ ತಿಳಿದ ಇವರು ನಂತರ ನೃತ್ಯವನ್ನು ಗುರುಗಳಾದ ಉಬೆರಡ್ಕ ಉಮೇಶ್ ಅವರ ಗರಡಿಯಲ್ಲಿ ಅಭ್ಯಾಸಮಾಡಿದ್ದು, ಪ್ರಸ್ತುತ ಆಳ್ವಾಸ್ ಕಾಲೇಜ್ ನಲ್ಲಿ ತೆಂಕು ಮತ್ತು ಬಡಗು ನಾಟ್ಯ ತರಬೇತಿ ಪಡೆಯುತ್ತಿದ್ದು, ಯಕ್ಷಗಾನ ಹಿಮ್ಮೇಳವಾದ ಮದ್ದಳೆ ಚೆಂಡೆ ವಾದನದ ತರಬೇತಿಯ ಜತೆಗೆ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದು ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧಕನಾಗೋದರಲ್ಲಿ ಸಂಶಯವಿಲ್ಲ.

ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣವನ್ನು ನಗರದ‌ ಪ್ರತಿಷ್ಠಿತ ರಾಮಕೃಷ್ಣ ಶಾಲೆಯಲ್ಲಿ ಪೋರೈಸಿ ಸದ್ಯಕ್ಕೆ ಯಕ್ಷಗಾನ ಹಾಗು‌ ಕ್ರೀಡೆಗೆ ಹೆಸರುವಾಸಿಯಾದ ಮೂಡಬಿದಿರೆಯ ಅಳ್ವಾಸ್  ಕಾಲೇಜ್ ನಲ್ಲಿ ಪಿ ಯು ಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇತ್ತಿಚಿನ ದಿನಗಳಲ್ಲಿ ನಾಟಕ ರಂಗ ಭೂಮಿಯಕಡೆಗೆ ತಮ್ಮ ಒಲವು ತೋರಿಸಿದ್ದು , ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದು. ತಾನು ಯಕ್ಷಗಾನಕ್ಕೂ ಸೈ ಜತೆಗೆ ನಾಟಕಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ.

ಇವರು ಇರಾ ಗ್ರಾಮದ ಸಂಪಿಲ ಯತಿರಾಜ್ ಶೆಟ್ಟಿ ಮತ್ತು ಭಾನುರೇಖ ವೈ ಶೆಟ್ಟಿ ದಂಪತಿಗಳ  ದ್ವಿತೀಯ ಪುತ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷಗಾನದಲ್ಲಿ ಮಿಂಚುತ್ತಿರುವ ನಮ್ಮ ಸಂಘದ ಯುವ ಪ್ರತಿಭೆಗಳು

     ಇರಾ ಗ್ರಾಮವು ಹಲವು ಸಾಧಕರ ನಾಡು, ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡುತ್ತ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಗೊಂಡಿದೆ ಆ ಸಾಧಕರ ಸಾಲಿಗೆ ಇರಾ ಗ್ರಾಮದ  ಗೌರವ್ ಕೊಟ್ಟಾರಿ ಮತ್ತು ಆದರ್ಶ್ ಪಕ್ಕಳ  ಎಂಬ 18ರ ಯುವಕರು ಸೇರ್ಪಡೆಗೊಂಡಿದ್ದಾರೆ. ಇವರು ನಮ್ಮ ಯುವಕ ಮಂಡಲದ ಸದಸ್ಯರು ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ. 


     ದ.ಕ ಗಂಡುಕಲೆ ಯಕ್ಷಗಾನವನ್ನು  ತನ್ನ ಅಭಿರುಚಿ ಮಾಡಿ ಹಲವಾರು ಬಯಲಾಟ ನೀಡಿದ ಹಾಗೂ ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿದ ಗೌರವ್ ಕೊಟ್ಟಾರಿ ಹಾಗು ಆದರ್ಶ್  ಪಕ್ಕಳ ಅವರನ್ನು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ)  ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.

       ಗೌರವ್ ಕೊಟ್ಟಾರಿ 23-12-2009 ರಂದು ವಿಷ್ಣುವಿನ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದು ಬಣ್ಣಹಚ್ಚಿ  ಶುರುವಾದ ಈ ಯಕ್ಷಗಾನದ ಜೊತೆಗಿನ ನಂಟಿಗೆ ಇಂದಿಗೆ ಎಂಟು ವರ್ಷ ತುಂಬಿದ್ದು ಅವರು ಯಕ್ಷಗಾನದಲ್ಲಿ ಮಾಡದ ಪಾತ್ರಗಳಿಲ್ಲ ವಿಷ್ಣು, ಅರ್ಜುನ,  ಹನುಮಂತ, ಬ್ರಹ್ಮ, ಕೃಷ್ಣ,  ಚಂಡಾಸುರ, ಹಿರಣ್ಯಕಶ್ಯಪ, ರಾವಣ, ಮಹಿಷಾಸುರ,ವಿದ್ಯುನ್ಮಾಲಿ, ಕಾರ್ತ್ಯವಿರ್ಯಾರ್ಜುನ, ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ.ಯಕ್ಷಗಾನದ ಗುರುಗಳಾದ ಯೋಗಿಶ್ ಅಚಾರ್ಯ,ಹಳೆಯಂಗಡಿ ಸತೀಶ್ ಮಡಿವಾಳ ಕಾರ್ಕಳ,ಉಬೆರಡ್ಕ ಉಮೇಶ್ ,ಗಣೇಶ್ ಅಚಾರ್ಯ ಗರಡಿಯಲ್ಲಿ ಪಳಗಿದ್ದು ಈ ಪ್ರತಿಭೆ ಚಂದ್ರ ಶೇಖರ್ ಧರ್ಮಸ್ಥಳ ಗೌರವ್ ಕೊಟ್ಟಾರಿಯ ಯಕ್ಷಗಾನದ  ರೋಲ್ ಮೋಡಲ್ . ಪ್ರಾಥಮಿಕ ಶಿಕ್ಷಣವನ್ನು ಪ್ರಗತಿ ಸೊಲ್ಕ್ ಕುಕ್ಕಾಜೆಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಶಾರದ ಪಿಯು ಕಾಲೇಜ್ ನಲ್ಲಿ ಸದ್ಯಕ್ಕೆ ಸೈಂಟ್ ಅಲೋಶಿಯಸ್ ಕಾಲೇಜ್ ನಲ್ಲಿ BSc ಮಾಡುತ್ತಾರೆ. 2013-2014 ಸಾಲಿನ ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಹಾಗೂ 2016-17 ಸಾಲಿನ ಪಿಯು ಹಂತದ ಇಂಟರ್ ಡಿಸ್ಟ್ರಿಕ್ಟ್‌ ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟರು.ಇವರ ಶೈಕ್ಷಣಿಕ ಸಾಧನೆ ನೋಡಿದಾಗ ಕಲಿಕೆಯ ಜೊತೆ ಅಭಿರುಚಿಯ ಅಧಾವ ಅಭಿರುಚಿ ಜೊತೆ ಕಲಿಕೆ ಅನ್ನುವ ಗೊಂದಲ ಮೂಡುತ್ತವೆ ಎಸ್ಸಲ್ಸಿ 96% ಪಿಯು ನಲ್ಲಿ 97 %  ಉತ್ತಮ ಅಂಕಗಳನ್ನು ಪಡೆದು ಮಿಂಚಿದ್ದಾರೆ. ಇತ್ತಿಚಿನ ದಿನಗಳಲ್ಲಿ ಫೋಟೋಗ್ರಫಿ ಯಕಡೆಗೆ ತಮ್ಮ ಒಲವು ತೋರಿಸಿದ್ದು , ಹತ್ತು ಹಲವಾರು ಛಾಯಾಚಿತ್ರಗಳನ್ನು ತೆಗೆದು ಭವಿಷ್ಯದಲ್ಲಿ ಹವ್ಯಾಸಿ ಪೋಟೋಗ್ರಾಫರ್ ಆಗಿ ಹೆಸರುಮಾಡುವುದರಲ್ಲಿ ಸಂಶಯವಿಲ್ಲ.ಇವರು ಇರಾ ಗ್ರಾಮದ ಸಂಪಿಲದ ಗಣೇಶ್ ಕೊಟ್ಟಾರಿ ಹಾಗೂ ಹೇಮಲತಾ .ಜಿ.  ಕೊಟ್ಟಾರಿ ದಂಪತಿಗಳ  ಪ್ರಥಮ ಪುತ್ರ

      ಆದರ್ಶ್ ಪಕ್ಕಳ  23-12-2009 ರಂದು ಸುದರ್ಷಣನ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದು ಬಣ್ಣಹಚ್ಚಿ  ಶುರುವಾದ ಈ ಯಕ್ಷಗಾನದ ಜೊತೆಗಿನ ನಂಟಿಗೆ ಇಂದಿಗೆ ಎಂಟು ವರ್ಷ ತುಂಬಿದ್ದು ಅವರು ಯಕ್ಷಗಾನದಲ್ಲಿ ಮಾಡದ ಪಾತ್ರಗಳಿಲ್ಲ ರಾಮ, ಶತ್ರುಘ್ನ, ದ್ರೋಣ, ಬಬ್ರುವಾಹನ, ಶಿವ, ದಕ್ಷ, ದೇವಿ, ಕೃಷ್ಣ, ಮುಂಡಾಸುರ, ಹಿರಣ್ಯಕಷ್ಯಪ, ರಾವಣ, ಮಹಿಷಾಸುರ, ಮುರಾಸುರ, ಸುದರ್ಷಣ, ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ.ಇವರ ಮೊದಲ ಗುರು  ಹವ್ಯಾಸಿ ಕಲಾವಿದರಾದ ಇವರ ಅಜ್ಜ ಶ್ರೀ ಮಹಾಬಲ ಪಕ್ಕಳ , ಜತೆಗೆ ಹವ್ಯಾಸಿ ಕಲಾವಿದರಾದ ತಂದೆ ಶ್ರೀ ಸತೀಶ್ ಪಕ್ಕಳರಿಂದ ಯಕ್ಷಗಾನದ ಆಯಾಮಗಳನ್ನ ತಿಳಿದ ಇವರು ನಂತರ ನೃತ್ಯವನ್ನು ಗುರುಗಳಾದ ಯೋಗಿಶ್ ಅಚಾರ್ಯ,ಹಳೆಯಂಗಡಿ ಸತೀಶ್ ಮಡಿವಾಳ ಕಾರ್ಕಳ,ಉಬೆರಡ್ಕ ಉಮೇಶ್ ,ಗಣೇಶ್ ಅಚಾರ್ಯ ಗರಡಿಯಲ್ಲಿ ಅಭ್ಯಾಸಮಾಡಿದ್ದು, ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧಕನಾಗೋದರಲ್ಲಿ ಸಂಶಯವಿಲ್ಲ.ಪ್ರಾಥಮಿಕ ಶಿಕ್ಷಣವನ್ನು ಪ್ರಗತಿ ಸೊಲ್ಕ್ ಕುಕ್ಕಾಜೆಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಯಕ್ಷಗಾನ ಚಟುವಟಿಕೆಗೆ ಹೆಸರುವಾಸಿಯಾಗಿರುವ ವಿವೇಕಾನಂದ  ಪಿಯು ಕಾಲೇಜ್ ನಲ್ಲಿ ಪೋರೈಸಿ ಸದ್ಯಕ್ಕೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ. 2012-2013 ಸಾಲಿನ ಪ್ರತೀಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟ ಇವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.ಇವರ ಶೈಕ್ಷಣಿಕ ಸಾಧನೆ ನೋಡಿದಾಗ ಕಲಿಕೆಯ ಜೊತೆ ಅಭಿರುಚಿಯ ಅಧಾವ ಅಭಿರುಚಿ ಜೊತೆ ಕಲಿಕೆ ಅನ್ನುವ ಗೊಂದಲ ಮೂಡುತ್ತವೆ ಎಸ್ಸಲ್ಸಿ 96% ಪಿಯು ನಲ್ಲಿ 94%  ಉತ್ತಮ ಅಂಕಗಳನ್ನು ಪಡೆದು ಮಿಂಚಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪಾಶ್ಚಾತ್ಯ ನೃತ್ಯದಕಡೆಗೆ ತಮ್ಮ ಒಲವು ತೋರಿಸಿದ್ದು , ಹತ್ತು ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದು. ತಾನು ಯಕ್ಷಗಾನಕ್ಕೂ ಸೈ ಜತೆಗೆ ನೃತ್ಯಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ.ಇವರು ಇರಾ ಗ್ರಾಮದ ಕುರಿಯಾಡಿಯ ಸತೀಶ್ ಪಕ್ಕಳ ಹಾಗೂ ಶಶಿಕಲಾ .ಎಸ್. ಪಕ್ಕಳ ದಂಪತಿಗಳ  ದ್ವಿತೀಯ ಪುತ್ರ

ಗೌರವ್ ಜಿ ಕೊಟ್ಟಾರಿ

ಆದರ್ಶ್ ಪಕ್ಕಳನಿಮ್ಮ ಟಿಪ್ಪಣಿ ಬರೆಯಿರಿ

ರಾಜಕೀಯ ಕ್ಷೇತ್ರದಲ್ಲಿ ಮಿಂಚುತ್ತಿರುವ ನಮ್ಮ ಸಂಘದ ಸದಸ್ಯರು

      2015ರಂದು ನಡೆದ ಇರಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿ ಇರಾ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮ ಸಂಘದ ಸಕ್ರೀಯ ಸದಸ್ಯರಾದ ಶ್ರೀ ರಮೇಶ್ ಪೂಜಾರಿ ಸಂಪಿಲ ಮತ್ತು ಶ್ರೀ ಶೇಖರ್ ಪೂಜಾರಿ ಕೆಂಜಿಲ ಇವರನ್ನು ಹಾರ್ದಿಕವಾಗಿ ಅಭಿನಂದಿಸುತ್ತ, ಜತೆಗೆ ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವ

-ಯುವಕ ಮಂಡಲ(ರಿ), ಇರಾ

ಇರಾ ಗ್ರಾ.ಪಂ. ಸದಸ್ಯರು 1ನೇ ವಾರ್ಡ್

ಇರಾ ಗ್ರಾ.ಪಂ. ಸದಸ್ಯರು 4 ನೇ ವಾರ್ಡ್


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕರ ಕಲಾ ಪ್ರಪಂಚ : ಕವನ ಕರ್ನಾಟಕದ ವೈಭವ

ಭಾರತದ ಇತಿಹಾಸದಲಿ
ಶೌರ್ಯದಿಂದ ಮೆರೆದ ನಾಡು ಕರ್ನಾಟಕ !
ಗಂಗ, ಕದಂಬ , ಚಾಲುಕ್ಯರು ಆಳಿದ ನಾಡು

ಪಂಪ, ರನ್ನ, ಜನ್ನರಿಂದ ಬೆಳಗಿದ ನಾಡು !
ಸತ್ಯ, ಶಾಂತಿ , ಧರ್ಮದಿಂದ ಕೂಡಿದ ನಾಡು
ಕಲೆ ವಿಜ್ಞಾನ ಸಾಹಿತ್ಯದ ಭಂಡಾರದ ಬೀಡು !

ಬೇಲೂರು ಹಳೇಬೀಡಿರುವ ಶಿಲ್ಪಕಲೆಯ ನಾಡು
ಜೋಗ ಜಲಪಾತವಿರುವ ಶ್ರೀ ಗಂಧದ ಬೀಡು !

ಗೋದಾವರಿ ಕೃಷ್ಣ ಕಾವೇರಿ ತುಂಬಿ ಹರಿವ ನಾಡು
ಮನಸೋರೆಗೊಳ್ಳುವ ಕರಾವಳಿಯ ಬೀಡು !

ಬೇರೆ ಬೇರೆ ಧರ್ಮಗಳಿರುವ ಸುಂದರ ನಾಡು
ನಾನಾ ಭಾಷಿಗರಿರುವ ಕನ್ನಡ ನಾಡು !

ಈ ನಮ್ಮ ಕರ್ನಾಟಕ ಬಂಗಾರದ ಬೀಡು
ಜನರೆಲ್ಲಾ ನೆಚ್ಚಿರುವ ನಲ್ಮೆಯ ನಾಡು. !

ರಚನೆ: ಅಶ್ವಿತ್ ಕೊಟ್ಟಾರಿ ಇರಾ