ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ

ಸಮಗ್ರ ಮಾಹಿತಿ

ಇರಾ ಗ್ರಾಮದ ಜನಪರ ಸಂಘವಾದ ಯುವಕ ಮಂಡಲ (ರಿ.) ಇರಾ ಇದರ ೪೪ನೇ ವರ್ಷದ ವಾರ್ಷಿಕೋತ್ಸವ ದಿನಾಂಕ 16-12-2017 ರ ಶನಿವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ರಜಾಕ್ ಕುಕ್ಕಾಜೆ ವಹಿಸಿ, ಯುವಕ ಮಂಡಲದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು ಜತೆಗೆ ಸರಕಾರದಿಂದ ಯುವ ಸಂಘಗಳಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವ ಬರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕರ್ಕೇರ, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಯಶವಂತ ಡಿ  ದೇರಾಜೆಗುತ್ತು , ಎಮ್ .ಎಮ್ ಕನ್ಸ್ಟ್ರಕ್ಷನ್ಸ್ ಮಂಗಳೂರು ಇದರ ಮಾಲೀಕರಾದ ಶ್ರೀ ಮಹಾಬಲ ಕೊಟ್ಟಾರಿ, ಶ್ರೀ ಲಲಿತೇ ಹಾಗು ಲಕುಮಿ ಕಲಾ ತಂಡದ ಮಾಲೀಕರಾದ ಲ| ಕಿಶೋರ್ ಡಿ ಶೆಟ್ಟಿ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಡಾ| ಸದಾನಂದ ಪೆರ್ಲ, ಹಾಸನ ಜಿಲ್ಲಾ ತುಳು ಒಕ್ಕೂಟದ ಸಂಚಾಲಕರಾದ ಶ್ರೀ ಅಜಿತ್ ಕುಮಾರ್ ಶೆಟ್ಟಿ, ಯುವಕ ಮಂಡಲದ ಸ್ಥಾಪಕ ಸದಸ್ಯರಾದ ಶ್ರೀ ವೇಣುಗೋಪಾಲ ಭಂಡಾರಿ ಬಾವಬೀಡು ಜತೆಗೆ ಯುವಕ ಮಂಡಲದ ಪ್ರಸ್ತುತ ಅಧ್ಯಕ್ಷರಾದ ಶ್ರೀ ಶೈಲೇಶ್ ರೈ ಉಪಸ್ಥತರಿದ್ದರು. ಈ ಸಂದರ್ಭದಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇರಾ ಗ್ರಾಮದ ಶ್ರೀ ನಿಶ್ಚಲ್ ಜಿ ಶೆಟ್ಟಿಯವರನ್ನು ಸಂಘದ ಎಲ್ಲಾ ಸದಸ್ಯರ ಹಾಗೂ ಊರ ಮಹನೀಯರ ಸಮಕ್ಷಮದಲ್ಲಿ  ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರಾದ ಯತಿರಾಜ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸದರು. ನಿತೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಚರಣ್ ಪಕ್ಕಳ ಸಂಘದ ವಾರ್ಷಿಕ ವರದಿ ನೀಡಿದರು ‌. ಅಶ್ವಿತ್ ಕೊಟ್ಟಾರಿ ಇರಾ ಸನ್ಮಾನಿತರ ಮಾಹಿತಿ ನೀಡಿದರು. ಪ್ರವೀಣ್ ವೈ ಬಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಸ್ಮಯ್ ವಿನಾಯಕ್ ಬಳಗದಿಂದ ಹಾಸ್ಯ ಕಾರ್ಯಕ್ರಮ ತದನಂತರ ಲಕುಮಿ ಕಲಾತಂಡದ ಕುಸಲ್ದ ಕಲಾವಿದರಿಂದ “ಒವುಲಾ ಒಂತೆ ದಿನನೆ” ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.