ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ‌ ಯುವಕ ಮಂಡಲದ 49ನೇ ವಾರ್ಷಿಕೋತ್ಸವ

ಯುವಕ ಮಂಡಲ (ರಿ.) ಇರಾ ಇದರ 49ನೇ‌ ವಾರ್ಷಿಕೋತ್ಸವ ದಿನಾಂಕ 25-12-2022 ರ ಭಾನುವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟದೊಂದಿಗೆ‌ ಸಂಪನ್ನವಾಯಿತು. ವಾರ್ಷಿಕೋತ್ಸವದ ಅಂಗವಾಗಿ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಿಕರಾದ ಶ್ರೀ ದಿವಾಣ ಗೋವಿಂದ ಭಟ್ ಮಾತನಾಡಿ ಯಕ್ಷಗಾನಕ್ಕೂ ಇರಾಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಬಹಳ ವಿಸ್ತೃತವಾಗಿ ವಿವರಿಸಿದರು.‌ನಂತರ ಮಾತನಾಡಿದ ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಿಕರಾದ ಶ್ರೀ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗು‌ ಯುವಕ‌ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ತಾಲೂಕು‌ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ ಯುವಕಮಂಡಲದ‌ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಯುವಕ‌ ಮಂಡಲದ ಸ್ಥಾಪಕ‌‌ ಸದಸ್ಯರಾದ ಶ್ರೀ ಗೋಪಾಲ ಮಾಸ್ಟರ್ ಕುಂಡಾವು, ಶ್ರೀ ಜನಾರ್ಧನ‌ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು. ಅತೀ ಹೆಚ್ಚು ‌ಅಂಕ ಗಳಿಸಿದ ಊರಿನ‌ ವಿದ್ಯಾರ್ಥಿಗಳಿಗೆ ‌ಪ್ರೊತ್ಸಾಹಧನ ನೀಡಲಾಯಿತು. ಯಕ್ಷಗಾನಕ್ಕೆ ಬೆನ್ನೆಲುಬಾಗಿ ನಿಂತು‌ ಸಂಘದ ‌ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ‌ ಪಾಲ್ಗೊಳ್ಳುವ ಸಂಘದ ಸದಸ್ಯರಾದ ಶ್ರೀ ಸ್ಟೀವನ್‌ ಡಿಸಿಲ್ವ ದೈವದಹಿತ್ಲು, ಶ್ರೀ ಅದ್ರಾಮ ಡಿ ಇವರನ್ನು ಗೌರವಿಸಲಾಯಿತು. ಸಂಧರ್ಭದಲ್ಲಿ ಉದ್ಯಮಿ, ಶ್ರೀ ಜಗದೀಶ ಆಳ್ವ ನಾರ್ಯಗುತ್ತು, ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು, ಶ್ರೀ ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ‌ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷ ವಾಙ್ಮಯಿ, ಅಭಿನಯ ಚಕ್ರವರ್ತಿ ಪುಷ್ಪರಾಜ್ ಕುಕ್ಕಾಜೆ

ಪುಷ್ಪರಾಜ್ ಕುಕ್ಕಾಜೆ ಹವ್ಯಾಸಿ ಯಕ್ಷಗಾನ ಕಲಾವಿದರಲ್ಲಿ ಮೇರುಪಂಕ್ತಿಯ ಕಲಾವಿದರು. 1954 ರಲ್ಲಿ ಸ್ಥಾಪಿತವಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದವರು ಇತ್ತೀಚೆಗೆ ನಡೆಸಿದ ಯಕ್ಷ ವಾಙ್ಮಯ 2020 ಸ್ಪರ್ಧೆಯಲ್ಲಿ ,61 ಸ್ಪರ್ದಿಗಳೆದುರು ಪ್ರಥಮ ಸ್ಥಾನ ಪಡೆದ ಪುಷ್ಪರಾಜರು ಕುಕ್ಕಾಜೆಯ ಹೆಮ್ಮೆ. ಇವರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದರು ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಮೇರಾವು ಮಹಾಬಲ ರೈಗಳು,ನಾಟ್ಯ ಕಲಿಸಿದವರು ಕಲಾವಿದರಾದ ಶ್ರೀಧರ ಪಂಜಾಜೆ ಇವರು. ಶ್ರೀ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಹಾಗು ಶ್ರೀ ದೂಮಣ್ಣ ರೈ ಕುಕ್ಕಾಜೆ ಇವರ ತಾಳಮದ್ದಳೆ ಗುರುಗಳಾಗಿದ್ದಾರೆ. 1993ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂಧರ್ಭದಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ 77 ಸ್ಪರ್ದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಇವರ ಪ್ರೌಢಿಮೆಗೆ ಸಾಕ್ಷಿ. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಯಕ್ಷಗಾನ ಸಂಘಟಕರಾಗಿಯೂ, ಕಾರ್ಯಕ್ರಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ಹವ್ಯಾಸಿ ಯಕ್ಷಗಾನ ರಂಗದಲ್ಲಿ 37 ವರ್ಷದ ಸಾರ್ಥಕ ಸೇವೆ ಸಲ್ಲಿಸಿದ್ದು, ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಮಾರ್ಗದರ್ಶಕರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದಾರೆ.ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಇವರ ಸಾಧನೆ ಅಪರಿಮಿತವಾದದ್ದು. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಮಾಜ ಸೇವೆ ಹಾಗು ಕಲಾ ಸೇವೆ ಮಾಡುತ್ತಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಇವರಿಗೆ ಇರಾ ಯುವಕ ಮಂಡಲದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

 

2cbfd889ca8047629f3537604efa9cdfFB_IMG_1594634045394


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವದ ಕರೆಯೋಲೆ

ಇತಿಹಾಸ ಪ್ರಸಿದ್ಧ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವ ಇದೇ ಬರುವ ಮಾರ್ಚ್ 5 ರಿಂದ 12ರ ತನಕ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ

– ಆಡಳಿತ ಸಮಿತಿ ಮತ್ತು ಸೇವಾ ಸಮಿತಿ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಹಾಗು ಊರ ಹತ್ತು ಸಮಸ್ತರು

-ಯುವಕ ಮಂಡಲ(ರಿ.) ಇರಾ

This slideshow requires JavaScript.


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಪ್ರದರ್ಶನಗೊಂಡ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನ ಬಯಲಾಟ

ಯುವಕ ಮಂಡಲ(ರಿ.) ಇರಾ ಇದರ ವತಿಯಿಂದ ಗಣೇಶ ಚತುರ್ಥಿ ಯ ಪ್ರಯುಕ್ತ , ಜಿಲ್ಲೆಯ ಸುಪ್ರಸಿದ್ಧ ಕಲಾವಿದರನ್ನೊಳಗೊಂಡ ಯಕ್ಷಗಾನ‌ ” ಪಂಚವಟಿ-ಮಕರಾಕ್ಷ-ಇಂದ್ರಜಿತು” ದಿನಾಂಕ 08-09-2019 ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಬಹಳ ಅಧ್ದೂರಿಯಾಗಿ ಪ್ರದರ್ಶನಗೊಂಡಿತು. ರಸರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯ, ಕಂಚಿನ ಕಂಠದ ಶ್ರೀ ಪ್ರಸಾದ್ ಬಲಿಪ, ಯುವ ಭಾಗವತ ಶ್ರೀ ಪ್ರದೀಪ್ ಗಟ್ಟಿ ಯವರ ಸುಮಧುರ ಹಾಡುಗಾರಿಕೆಯೊಂದಿಗೆ , ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಕ್ಷಯ್ ಕಾರ್ನಾಡ್, ಪೆರ್ಮುದೆ, ರಂಗ ಸವ್ಯಸಾಚಿ ಸಂತೋಷ್ ಮಾನ್ಯ, ಹಾಸ್ಯಗಾರ ಮಹೇಶ್ ಮಣಿಯಾಣಿ, ವೆಂಕಟೇಶ್ ಕಲ್ಲುಗುಂಡಿ, ರಾಜೇಶ್ ಆಚಾರ್ಯ ಸಂಪಿಗೆ, ಪ್ರೇಮ್ ರಾಜ್ ಕೊಯ್ಲ, ಬಜಕೊಡ್ಲು, ಜತಗೆ ಊರಿನ ಪ್ರತಿಭೆ ಅಪತ್ಭಾಂದವ ಶ್ರೀ ಪುಷ್ಪರಾಜ್ ಕುಕ್ಕಾಜೆ ರಂಗಸ್ಥಳ ಅಲಂಕರಿಸಿದರು. ಕಳೆದ ಹತ್ತು ವರ್ಷಗಳಿಂದ ಯುವಕ‌ ಮಂಡಲ ನಡೆಸಿಕೊಂಡು ಬಂದಿರುವ ಈ ಯಕ್ಷಸೇವೆಗೆ ಹಲವು ಧಾನಿಗಳು ನೆರವು‌ ನೀಡಿರುತ್ತಾರೆ. ಈ ದಿನ ಸಂಪೂರ್ಣ ಸಹಕಾರ ನೀಡಿದ ಧಾನಿಗಳಾದ ಶ್ರೀಮತಿ ಮತ್ತು ಶ್ರೀ ಕೇಶವ ಶೆಟ್ಟಿ ಮೇರಾವು, ಕುರಿಯಾಡಿ ತೋಟ ಶ್ರೀಮತಿ ಮತ್ತು ಶ್ರೀ ಸತೀಶ್ ಶೆಟ್ಟಿ , ಶ್ರೀ ಮತಿ ಮತ್ತು ಶ್ರೀ ಚನಿಯಪ್ಪ ನಾಯ್ಕ ಹಾಗು ಸಂಘದ ಸಕ್ರೀಯ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಕೇಶವ ಭಂಡಾರಿಯವರನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


 


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಚತುರ್ಥಿಯ ಪ್ರಯುಕ್ತ ಇರಾ ಯುವಕ ಮಂಡಲ ಪ್ರಾಯೋಜಿತ ಬಹು ನಿರೀಕ್ಷೆಯ ಯಕ್ಷಗಾನ

ಗಣೇಶ ಚತುರ್ಥಿಯ ಪ್ರಯುಕ್ತ, ಇರಾ ಯುವಕ ಮಂಡಲ(ರಿ) ಇರಾ ಇವರ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 8ರಂದು ಇರಾ ದೇವಸ್ಥಾನದ ವಠಾರದಲ್ಲಿ  ಮಧ್ಯಾಹ್ನ 2 ರಿಂದ ಬಹು ನಿರೀಕ್ಷೆಯ ಕಾರ್ಯಕ್ರಮ ಅದ್ದೂರಿ ಯಕ್ಷಗಾನ ಬಯಲಾಟ ” ಪಂಚವಟಿ-ಮಕರಾಕ್ಷ-ಇಂದ್ರಜಿತು”. ಯಕ್ಷ ರಂಗದ ದಿಗ್ಗಜರ ಕೂಡುವಿಕೆಯಲ್ಲಿ ಹಾಗು ಹತ್ತು ಹಲವಾರು ವಿಶೇಷ ಆಕರ್ಷಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ.

ಯುವಕ ಮಂಡಲ ಇರಾ..

IMG-20190627-WA0004


ನಿಮ್ಮ ಟಿಪ್ಪಣಿ ಬರೆಯಿರಿ

ಕರಾವಳಿಯಲ್ಲಿ ಮಗದೊಮ್ಮೆ ಸೌಹಾರ್ದತೆಯ ಚಿಲುಮೆಗೆ ನಾಂದಿಹಾಡಿದ ನವವಿವಾಹಿತ ನಮ್ಮ ಯುವಕ ಮಂಡಲದ‌ ಸದಸ್ಯ ಶೈಲೇಶ್ ರೈ

ಕರಾವಳಿಯ ಹೃದಯ ಬಾಗವಾಗಿರುವ ಈ ಪರಿಸರದಲ್ಲಿ ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಸಲುವಾಗಿ, ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಸಂಬಾರ ತೋಟ ಎಂಬಲ್ಲಿ ನಡೆದಿದೆ.
ಇಂದು ಮನುಷ್ಯ ಮನಸ್ಸುಗಳಲ್ಲಿ ಸಾವಿರ ರೀತಿಯ ತನ್ನದೇ ಧರ್ಮದ ಚಿಂತನೆಗಳು ಮೂಡುತ್ತಿರುವ ಸಂಧರ್ಭದಲ್ಲಿ ಶೈಲೇಶ್ ಎಂಬ ವ್ಯಕ್ತಿಯ ಈ ಸುಂದರ ಚಿಂತನೆಯನ್ನು ಸರ್ವಧರ್ಮಿಯರು ಕೊಂಡಾಡಬೇಕಾಗಿದೆ….
ಶೈಲೇಶ್ ಎಂಬ ವ್ಯಕ್ತಿಯು ಮೂಲತಃ ಇರಾ ವ್ಯಾಪ್ತಿಯಲ್ಲಿ ನೆಲೆಸಿ,, ತನ್ನ ಉದ್ಯೋಗ ವೃತ್ತಿಯನ್ನು ಮುಡಿಪು ಪರಿಸರದ ಸಂಬಾರ ತೋಟದಲ್ಲಿ “ಅಮ್ಮ ಎಂಟರ್ಪ್ರೈಸಸ್ “ಎಂಬ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮಾರಾಟ ಮಾಡುವ ತನ್ನದೇ ಆದ ಸ್ವಂತ ಕೇಂದ್ರದಲ್ಲಿ ತನ್ನ ಉದ್ಯೋಗವನ್ನು ಎಲ್ಲರ ಮೆಚ್ಚುಗೆಯೊಂದಿಗೆ ಮುನ್ನಡೆಸುತ್ತಿದ್ದಾರೆ…
ಸರ್ವಧರ್ಮಿಯರು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತ ಅಲ್ಲ,,, ನನ್ನ ಜೀವನದ ಎಲ್ಲ ಕಷ್ಟ ಸುಖಗಳಿಗೂ ಸೀಮಿತ ಎನ್ನುವ ನಿಟ್ಟಿನಲ್ಲಿ,,,
ಶ್ರೀಯುತ ಶೈಲೇಶ್ ಅವರು ತನ್ನ ಕರ್ಮಭೂಮಿಯ ಸುತ್ತಮುತ್ತಲಿನ ಎಲ್ಲಾ ಮುಸಲ್ಮಾನ ಬಂದುಗಳಿಗೆ ತನ್ನ ಸುಂದರ ಸಾಂಸಾರಿಕ ಜೀವನಕ್ಕೆ ನಾಂದಿಹಾಡುವ ಪುಣ್ಯಕಾರ್ಯಕ್ಕೆ ಆಮಂತ್ರಣ ನೀಡುವ ಸಂಧರ್ಭದಲ್ಲಿ, ಮುಸಲ್ಮಾನರು ಉಪವಾಸ ವ್ರತದಲ್ಲಿರುವರು ಎಂದು ತಿಳಿದು ಆ ಎಲ್ಲರನ್ನು ಅಂದು ತನ್ನ ಮನೆಗೆ ರಾತ್ರಿಯ ಔತಣಕೂಟಕ್ಕೆ ಕರೆದು ಆಶೀರ್ವಾದ ಮಾಡಬೇಕೆಂದು ಹೇಳಿದ್ದಲ್ಲದೇ ನೂರಾನಿಯ ಜುಮಾ ಮಸೀದಿ ಸಂಬಾರ ತೋಟದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ತನ್ನ ಸೌಹಾರ್ದ ಮನೋಭಾವನೆಯನ್ನು ಇಡೀ ಮನುಕುಲಕ್ಕೆ ಸಾರುವಂತಿದೆ.
ಇವರು ಶ್ರೀ ಸೋಮನಾಥೇಶ್ವರ ದೇವಾಲಯ ದಲ್ಲಿ ತನ್ನ ಕನಸಿನ ರಾಣಿ ಶ್ರುತಿ ಯವರೊಂದಿಗೆ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ… ಇವರ ಈ ಸುಂದರ ಚಿಂತನೆಯ ಬದುಕು ಯಶಸ್ವಿಯಾಗಲಿ,ಇವರ ಜೀವನ ಶೈಲಿ ಉಳಿದ್ದೆಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಮನಸ್ಸಿನ ಅಂತರಾಳದಿಂದ ಹಾರೈಸುತ್ತಿದ್ದೇವೆ…..
✍️ಸರ್ವ ನಾಗರೀಕರು ಸಂಬಾರ ತೋಟ .

IMG-20190520-WA0015


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಕರೆಯೋಲೆ

ಇತಿಹಾಸ ಪ್ರಸಿದ್ಧ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ಯುವಕ ಮಂಡಲ(ರಿ.) ಇರಾ ಮತ್ತು ಸೋಮನಾಥೇಶ್ವರ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ದಿನಾಂಕ 18-02-2019 ರಂದು ರಾತ್ರಿ 8ಗಂಟೆಗೆ ಇರಾ ದೇವಳದ ವಠಾರದಲ್ಲಿ ತುಳು ಸಾಮಾಜಿಕ ಹಾಸ್ಯಮಯ ನಾಟಕ “ಬಂಜಿಗ್ ಹಾಕೊಡ್ಚಿ” ನಡೆಯಲಿದ್ದು ಕಲಾಭಿಮಾನಿಗಳಿಗೆ ಹಾರ್ಧಿಕ‌ ಸ್ವಾಗತ ಬಯಸುವ ಯುವಕ ಮಂಡಲ (ರಿ.) ಇರಾ.

img-20190112-wa0014


ನಿಮ್ಮ ಟಿಪ್ಪಣಿ ಬರೆಯಿರಿ

ನಗರ ಭಜನಾ ಮಂಗಳೋತ್ಸವ

ಪ್ರತೀ ವರ್ಷ ನಡೆಯುವ ಭಜನಾ ಮಂಗಳೋತ್ಸವ ಸೋಮವಾರದಂದು ಇರಾ ಶಾಲಾ ವಠಾರದಲ್ಲಿ ಸಂಪನ್ನವಾಯಿತು. ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಸದಸ್ಯರು ಹಾಗು ಊರಿನ , ಪರವೂರಿನ ಭಜನಾ ಮಂಡಳಿಯ ಸದಸ್ಯರು ದೇವರ ಸಂಕೀರ್ತನೆಗಳೊಂದಿಗೆ ಶ್ರೀ ದೇವರನ್ನು ಭಜಿಸಿ ಕೃತಾರ್ಥರಾದರು.

ಛಾಯಚಿತ್ರ: ತಿಲಕ್ ರಾಜ್ ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ದೇವಸ್ಥಾನದಲ್ಲಿ ನಡೆದ ಆಯುಧ ಪೂಜೆ

ನವರಾತ್ರಿಯ ಒಂಬತ್ತನೆ ದಿನದಂದು‌ ನಡೆಯುವ ಆಯುಧ ಪೂಜಾ ಕಾರ್ಯಕ್ರಮ ಇಂದು ಬೆಳಗ್ಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಊರವರ ಹಾಗು ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ವರ್ಷಂಪ್ರತಿಯಂತೆ ಈ ವರ್ಷವು ನೂರಾರು ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

ಮಾಹಿತಿ: ಶೈಲೇಶ್ ರೈ ಡಿ


2 ಟಿಪ್ಪಣಿಗಳು

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ ಮಂಡಲ ಪ್ರಾಯೋಜಿತ ಇರಾ ಯಕ್ಷೋತ್ಸವ

ಸೆಪ್ಟೆಂಬರ್ 23, 2018ರಂದು ಗಣೇಶ ಚತುರ್ಥಿಯ ಪ್ರಯುಕ್ತ ಯುವಕ ಮಂಡಲ(ರಿ.) ಇರಾ ಇದರ ಸದಸ್ಯರು ಆಯೋಜಿಸಿದ್ದ ಇರಾ ಯಕ್ಷೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸರಿಯಾಗಿ ಅಪರಾಹ್ನ 2.30ಕ್ಕೆ ಪ್ರಾರಂಭವಾದ ಯಕ್ಷಗಾನ ಮೊದಲಿಗೆ ರಸ ರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯರ ಭಾಗವತಿಕೆಯಲ್ಲಿ “ಕೃಷ್ಣಾರ್ಜುನ” ಪ್ರಸಂಗ ನಡೆದರೆ, ತದನಂತರ ಸ್ವರ ಗಂಭೀರ  ಶ್ರೀ ಪ್ರಸಾದ್ ಬಲಿಪರ ಭಾಗವತಿಕೆಯಲ್ಲಿ ” ಅಗ್ರಪೂಜೆ” ಪ್ರಸಂಗ ನಡೆಯಿತು. ಎರಡೂ ಪ್ರಸಂಗಗಳಲ್ಲಿ ಜಲ್ಲೆಯ ಸುಪ್ರಸಿದ್ಧ ಕಲಾವಿದರು ಪಾತ್ರವಹಿಸಿ ಜನಮನ್ನಣೆಗಳಿಸಿದರು. ಮೊದಲ ಪ್ರಸಂಗದಲ್ಲಿ ಶ್ರೀ ಕೃಷ್ಣನಾಗಿ ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ ಮಿಂಚಿದರೆ, ಅರ್ಜುನನಾಗಿ ಯಕ್ಷ ರಂಗದ ರಾಜ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಜೀವ ತುಂಬಿದರು. ಇವರಿಬ್ಬರಿಗೆ ಜತೆಯಾಗಿ ಶ್ರೀ ಅಕ್ಷಯ್ ಕುಮಾರ್ ಮಾರ್ನಾಡ್ ಸುಭದ್ರೆಯಾಗಿ ರಂಜಿಸಿದರು.  ಅಗ್ರಪೂಜೆ ಪ್ರಸಂಗದಲ್ಲಿ ಯಕ್ಷ ರಂಗದ ಧ್ರುವತಾರೆ ಶ್ರೀ ಸಂತೋಷ್ ಕುಮಾರ್ ಮಾನ್ಯ ಶಿಶುಪಾಲನಾಗಿ ಅಬ್ಬರಿಸಿದರೆ, ಅವರಿಗೆ ಜತೆಯಾಗಿ ಮತ್ತೊರ್ವ ಅಗ್ರಮಾನ್ಯ ಕಲಾವಿದ ರಾಹುಲ್ ಶೆಟ್ಟಿ ಕುಡ್ಲ ದಂತವಕ್ರನಾಗಿ ರಂಗಸ್ಥಳ ಪುಡಿಗೈದರು. ಊರಿನ  ಅಗ್ರಮಾನ್ಯ ಕಲಾವಿದರಾದ ಶ್ರೀ ಪುಷ್ಪರಾಜ್ ಕುಕ್ಕಾಜೆ ಹಾಗು ಶ್ರೀ ಶ್ರೀಧರ ಪಂಜಾಜೆ ಜತೆಗೆ ನಮ್ಮ ಸಂಘದ ಯುವ ಕಲಾವಿದರಾದ ಶ್ರೀ ಗೌರವ್ ಜಿ ಕೊಟ್ಟಾರಿ ಹಾಗು ಶ್ರೀ ಸುಹಾಗ್ ಜಿ ಕೊಟ್ಟಾರಿ ತಮ್ಮ ಪಾತ್ರಗಳಿಗೆ ಜೀವತುಂಬಿ ಜನರ ಮೆಚ್ಚುಗೆಗೆ ಪಾತ್ರರಾದರು.