ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿಯ‌ ಕ್ರೀಡಾ ಕೂಟ

ಯುವಕ‌ ಮಂಡಲ (ರಿ.) ಇರಾ ಇದರ ವತಿಯಿಂದ‌ ನಡೆದ 49 ನೇ‌ ವರ್ಷದ ಕ್ರೀಡಾ ಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು.‌ ಮಕ್ಕಳಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಗು ತೀರ್ಪುಗಾರರಾಗಿ ಭಾಗವಹಿಸಿದ ಶ್ರೀ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ‌ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ, ಶ್ರೀ ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಶ್ರೀ ಹಬೀಬ್ ರಹಿಮಾನ್ , ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಹಾಗು ಯುವಕ ಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗು ವರದರಾಜ‌ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಸರ್ವರಿಗೂ ಗೌರೀ ಗಣೇಶ ಹಬ್ಬದ ಶುಭಾಶಯಗಳು

*ಆತ್ಮೀಯರೇ, ಪ್ರತಿ ವರ್ಷ ನಮ್ಮ ಯುವಕ ಮಂಡಲದ ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ನಾವು ವಿವಿಧ ಕಾರ್ಯಕ್ರಮಗಳ ಜತೆಗೆ ಯಕ್ಷಗಾನ ಬಯಲಾಟವನ್ನು ಅಧ್ಧೂರಿಯಾಗಿ ಆಯೋಜಿಸಿಕೊಂಡು ಬಂದಿರುತ್ತೇವೆ. ಆದರೇ ಜಗತ್ತಿಗೆ ಸಂಕಷ್ಟ ತಂದೊಡ್ಡಿದ ಕೊರೋನಾದಿಂದ ಈ ವರ್ಷ ಕಾರ್ಯಕ್ರಮ ‌ನಡೆಸಲು ಅನಾನುಕೂಲವಾಗಿದ್ದು, ಪ್ರತೀ ವರ್ಷ ನಮ್ಮ ಕಾರ್ಯಕ್ರಮಗಳಿಗೆ‌ ತುಂಬು ಹೃದಯದ ಸಹಕಾರ, ಪ್ರೋತ್ಸಾಹ ನೀಡಿರುವ ಸಹೃದಯಿಗಳಾದ ತಮ್ಮೆಲ್ಲರಿಗೂ ಗೌರೀ ಗಣೇಶ ಹಬ್ಬದ ಶುಭಾಶಯಗಳು. ಭಗವಾನ್ ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು, ಆರೋಗ್ಯ ವನ್ನು ದಯ ಪಾಲಿಸಲಿ. ನಿಮ್ಮೆಲ್ಲರ ಸಹಕಾರ ಹೀಗೆ ನಮ್ಮ ಮೇಲಿರಲಿ ಎಂದು‌ ಅಶಿಸುವ.*

*ಯುವಕ ‌ಮಂಡಲ(ರಿ.) ಇರಾ*

Ganesha_Panchamukha[1]


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಪ್ರದರ್ಶನಗೊಂಡ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನ ಬಯಲಾಟ

ಯುವಕ ಮಂಡಲ(ರಿ.) ಇರಾ ಇದರ ವತಿಯಿಂದ ಗಣೇಶ ಚತುರ್ಥಿ ಯ ಪ್ರಯುಕ್ತ , ಜಿಲ್ಲೆಯ ಸುಪ್ರಸಿದ್ಧ ಕಲಾವಿದರನ್ನೊಳಗೊಂಡ ಯಕ್ಷಗಾನ‌ ” ಪಂಚವಟಿ-ಮಕರಾಕ್ಷ-ಇಂದ್ರಜಿತು” ದಿನಾಂಕ 08-09-2019 ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಬಹಳ ಅಧ್ದೂರಿಯಾಗಿ ಪ್ರದರ್ಶನಗೊಂಡಿತು. ರಸರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯ, ಕಂಚಿನ ಕಂಠದ ಶ್ರೀ ಪ್ರಸಾದ್ ಬಲಿಪ, ಯುವ ಭಾಗವತ ಶ್ರೀ ಪ್ರದೀಪ್ ಗಟ್ಟಿ ಯವರ ಸುಮಧುರ ಹಾಡುಗಾರಿಕೆಯೊಂದಿಗೆ , ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಕ್ಷಯ್ ಕಾರ್ನಾಡ್, ಪೆರ್ಮುದೆ, ರಂಗ ಸವ್ಯಸಾಚಿ ಸಂತೋಷ್ ಮಾನ್ಯ, ಹಾಸ್ಯಗಾರ ಮಹೇಶ್ ಮಣಿಯಾಣಿ, ವೆಂಕಟೇಶ್ ಕಲ್ಲುಗುಂಡಿ, ರಾಜೇಶ್ ಆಚಾರ್ಯ ಸಂಪಿಗೆ, ಪ್ರೇಮ್ ರಾಜ್ ಕೊಯ್ಲ, ಬಜಕೊಡ್ಲು, ಜತಗೆ ಊರಿನ ಪ್ರತಿಭೆ ಅಪತ್ಭಾಂದವ ಶ್ರೀ ಪುಷ್ಪರಾಜ್ ಕುಕ್ಕಾಜೆ ರಂಗಸ್ಥಳ ಅಲಂಕರಿಸಿದರು. ಕಳೆದ ಹತ್ತು ವರ್ಷಗಳಿಂದ ಯುವಕ‌ ಮಂಡಲ ನಡೆಸಿಕೊಂಡು ಬಂದಿರುವ ಈ ಯಕ್ಷಸೇವೆಗೆ ಹಲವು ಧಾನಿಗಳು ನೆರವು‌ ನೀಡಿರುತ್ತಾರೆ. ಈ ದಿನ ಸಂಪೂರ್ಣ ಸಹಕಾರ ನೀಡಿದ ಧಾನಿಗಳಾದ ಶ್ರೀಮತಿ ಮತ್ತು ಶ್ರೀ ಕೇಶವ ಶೆಟ್ಟಿ ಮೇರಾವು, ಕುರಿಯಾಡಿ ತೋಟ ಶ್ರೀಮತಿ ಮತ್ತು ಶ್ರೀ ಸತೀಶ್ ಶೆಟ್ಟಿ , ಶ್ರೀ ಮತಿ ಮತ್ತು ಶ್ರೀ ಚನಿಯಪ್ಪ ನಾಯ್ಕ ಹಾಗು ಸಂಘದ ಸಕ್ರೀಯ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಕೇಶವ ಭಂಡಾರಿಯವರನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


 


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿ

ಯುವಕ‌ ಮಂಡಲ(ರಿ.) ಇರಾ ಇದರ ವತಿಯಿಂದ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಗಣೇಶ ಚತುರ್ಥಿಯ ಅಂಗವಾಗಿ ಇರಾ ಶಾಲಾ ಮಕ್ಕಳಿಗೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಊರಿನ ಯುವಕರಿಗೆ ವಾಲಿಬಾಲ್ ,ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾಸಕ್ತ ಯುವಕರನ್ನು ಪ್ರೋತ್ಸಾಹಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ನಮ್ಮ ಗ್ರಾಮದ ಪ್ರಥಮ ಪ್ರಜೆ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ , ನಮ್ಮ ಸಂಘದ ಸದಸ್ಯರೂ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿ ಸಂಪಿಲ, ಗೋಪಾಲ ಅಶ್ವತ್ಥಡಿ, ಸಂಘದ ಹಿರಿಯ ಸದಸ್ಯರಾದ ಯತಿರಾಜ್ ಶೆಟ್ಟಿ, ಸುರೇಶ್  ಕೊಟ್ಟಾರಿ, ಸುರೇಶ್ ರೈ, ವಾಮನ ಪೂಜಾರಿ ಬಹುಮಾನ ವಿತರಿಸಿದರು. ಕೊನೆಗೆ‌ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದ ಗ್ರಾಮ‌‌ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಯುವಕ‌ ಮಂಡಲದ ಕಾರ್ಯ ಚಟುವಟಿಕೆಗಳ ಶ್ಲಾಘಿಸಿದರು. ಸಂಘದ ಕಾರ್ಯದರ್ಶಿ ನಿತೇಶ್ ಶೆಟ್ಟಿ, ನಿಶಾನ್ ಕೊಟ್ಟಾರಿ ಕಾರ್ಯಕ್ರಮ‌ ನಿರೂಪಿಸಿದರು. ಅಧ್ಯಕ್ಷ ಚರಣ್ ಪಕ್ಕಳ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ವರದರಾಜ್ ವಂದಿಸಿದರು.‌ ಸಂಘದ ಎಲ್ಲಾ ಪಧಾದಿಕಾರಿಗಳು, ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.

IMG_20190902_103139IMG_20190902_103212IMG_20190902_105935IMG_20190902_105949IMG-20190902-WA0090IMG-20190902-WA0086IMG-20190902-WA0085IMG-20190902-WA0091IMG-20190902-WA0078IMG-20190902-WA0080


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಚತುರ್ಥಿಯ ಪ್ರಯುಕ್ತ ಇರಾ ಯುವಕ ಮಂಡಲ ಪ್ರಾಯೋಜಿತ ಬಹು ನಿರೀಕ್ಷೆಯ ಯಕ್ಷಗಾನ

ಗಣೇಶ ಚತುರ್ಥಿಯ ಪ್ರಯುಕ್ತ, ಇರಾ ಯುವಕ ಮಂಡಲ(ರಿ) ಇರಾ ಇವರ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 8ರಂದು ಇರಾ ದೇವಸ್ಥಾನದ ವಠಾರದಲ್ಲಿ  ಮಧ್ಯಾಹ್ನ 2 ರಿಂದ ಬಹು ನಿರೀಕ್ಷೆಯ ಕಾರ್ಯಕ್ರಮ ಅದ್ದೂರಿ ಯಕ್ಷಗಾನ ಬಯಲಾಟ ” ಪಂಚವಟಿ-ಮಕರಾಕ್ಷ-ಇಂದ್ರಜಿತು”. ಯಕ್ಷ ರಂಗದ ದಿಗ್ಗಜರ ಕೂಡುವಿಕೆಯಲ್ಲಿ ಹಾಗು ಹತ್ತು ಹಲವಾರು ವಿಶೇಷ ಆಕರ್ಷಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ.

ಯುವಕ ಮಂಡಲ ಇರಾ..

IMG-20190627-WA0004


2 ಟಿಪ್ಪಣಿಗಳು

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ ಮಂಡಲ ಪ್ರಾಯೋಜಿತ ಇರಾ ಯಕ್ಷೋತ್ಸವ

ಸೆಪ್ಟೆಂಬರ್ 23, 2018ರಂದು ಗಣೇಶ ಚತುರ್ಥಿಯ ಪ್ರಯುಕ್ತ ಯುವಕ ಮಂಡಲ(ರಿ.) ಇರಾ ಇದರ ಸದಸ್ಯರು ಆಯೋಜಿಸಿದ್ದ ಇರಾ ಯಕ್ಷೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸರಿಯಾಗಿ ಅಪರಾಹ್ನ 2.30ಕ್ಕೆ ಪ್ರಾರಂಭವಾದ ಯಕ್ಷಗಾನ ಮೊದಲಿಗೆ ರಸ ರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯರ ಭಾಗವತಿಕೆಯಲ್ಲಿ “ಕೃಷ್ಣಾರ್ಜುನ” ಪ್ರಸಂಗ ನಡೆದರೆ, ತದನಂತರ ಸ್ವರ ಗಂಭೀರ  ಶ್ರೀ ಪ್ರಸಾದ್ ಬಲಿಪರ ಭಾಗವತಿಕೆಯಲ್ಲಿ ” ಅಗ್ರಪೂಜೆ” ಪ್ರಸಂಗ ನಡೆಯಿತು. ಎರಡೂ ಪ್ರಸಂಗಗಳಲ್ಲಿ ಜಲ್ಲೆಯ ಸುಪ್ರಸಿದ್ಧ ಕಲಾವಿದರು ಪಾತ್ರವಹಿಸಿ ಜನಮನ್ನಣೆಗಳಿಸಿದರು. ಮೊದಲ ಪ್ರಸಂಗದಲ್ಲಿ ಶ್ರೀ ಕೃಷ್ಣನಾಗಿ ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ ಮಿಂಚಿದರೆ, ಅರ್ಜುನನಾಗಿ ಯಕ್ಷ ರಂಗದ ರಾಜ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಜೀವ ತುಂಬಿದರು. ಇವರಿಬ್ಬರಿಗೆ ಜತೆಯಾಗಿ ಶ್ರೀ ಅಕ್ಷಯ್ ಕುಮಾರ್ ಮಾರ್ನಾಡ್ ಸುಭದ್ರೆಯಾಗಿ ರಂಜಿಸಿದರು.  ಅಗ್ರಪೂಜೆ ಪ್ರಸಂಗದಲ್ಲಿ ಯಕ್ಷ ರಂಗದ ಧ್ರುವತಾರೆ ಶ್ರೀ ಸಂತೋಷ್ ಕುಮಾರ್ ಮಾನ್ಯ ಶಿಶುಪಾಲನಾಗಿ ಅಬ್ಬರಿಸಿದರೆ, ಅವರಿಗೆ ಜತೆಯಾಗಿ ಮತ್ತೊರ್ವ ಅಗ್ರಮಾನ್ಯ ಕಲಾವಿದ ರಾಹುಲ್ ಶೆಟ್ಟಿ ಕುಡ್ಲ ದಂತವಕ್ರನಾಗಿ ರಂಗಸ್ಥಳ ಪುಡಿಗೈದರು. ಊರಿನ  ಅಗ್ರಮಾನ್ಯ ಕಲಾವಿದರಾದ ಶ್ರೀ ಪುಷ್ಪರಾಜ್ ಕುಕ್ಕಾಜೆ ಹಾಗು ಶ್ರೀ ಶ್ರೀಧರ ಪಂಜಾಜೆ ಜತೆಗೆ ನಮ್ಮ ಸಂಘದ ಯುವ ಕಲಾವಿದರಾದ ಶ್ರೀ ಗೌರವ್ ಜಿ ಕೊಟ್ಟಾರಿ ಹಾಗು ಶ್ರೀ ಸುಹಾಗ್ ಜಿ ಕೊಟ್ಟಾರಿ ತಮ್ಮ ಪಾತ್ರಗಳಿಗೆ ಜೀವತುಂಬಿ ಜನರ ಮೆಚ್ಚುಗೆಗೆ ಪಾತ್ರರಾದರು.

 


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಇರಾ ಗಣೇಶೋತ್ಸವ

ಇಂದು ಗಣೇಶ ಚತುರ್ಥಿ ಯ ಅಂಗವಾಗಿ ಯುವಕ ಮಂಡಲ(ರಿ.) ಇರಾ ಇದರ ಪ್ರಾಯೋಜಕತ್ವದಲ್ಲಿ ಇರಾ ಶಾಲಾ ಮೈದಾನದಲ್ಲಿ , ಊರಿನ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾದ ಕ್ರೀಡೋತ್ಸವ, ಊರಿನ ಹಿರಿಯರ ಹಾಗು ಕ್ರೀಡಾಸಕ್ತರ ಸಹಕಾರದಿಂದ ಸಂಪೂರ್ಣ ಯಶಸ್ವಿಯಾಯಿತು. ವರ್ಷಂಪ್ರತಿಯಂತೆ ಊರಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಗಳು ಹಾಗು ಯುವಕರಿಗೆ‌ ವಾಲಿ ಬಾಲ್ ಹಾಗು ಹಗ್ಗಜಗ್ಗಾಟ ಕ್ರಿಡೆಯನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ   ಊರಿನ ಹಲವು ಪ್ರಮುಖರು, ಯುವಕ ಮಂಡಲದ ಅಧ್ಯಕ್ಷ ರು, ಪಧಾದಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು. 

 


ನಿಮ್ಮ ಟಿಪ್ಪಣಿ ಬರೆಯಿರಿ

ಸ್ವಚ್ಚ ಭಾರತ್ ಅಭಿಯಾನದಡಿ ಯುವಕ ಮಂಡಲದ ಸದಸ್ಯರಿಂದ ನಡೆದ ಸ್ವಚ್ಚತಾ ಕಾರ್ಯ

ಯುವಕ ಮಂಡಲದ ಸದಸ್ಯರಿಂದ ಗಣೇಶ ಚತುರ್ಥಿ ಯ ಪ್ರಯುಕ್ತ  ಇಂದು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಹಾಗು ಇರಾ ಯುವಕ ಮಂಡಲದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಛಾಯಾಚಿತ್ರ: ಗೌರವ್ ಜಿ ಕೊಟ್ಟಾರಿ


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಚತುರ್ಥಿಯ ಪ್ರಯುಕ್ತ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನದ ಕರೆಯೋಲೆ

ವರ್ಷಂಪ್ರತಿಯಂತೆ ಗಣೇಶ ಚತುರ್ಥಿಯ ಅಂಗವಾಗಿ ಯುವಕ ಮಂಡಲ( ರಿ.) ಇರಾ‌ ಇದರ ಪ್ರಾಯೋಜಕತ್ವ ದಲ್ಲಿ “ಕೃಷ್ಷಾರ್ಜುನ-ಅಗ್ರಪೂಜೆ” ಎಂಬ ಯಕ್ಷಗಾನ ಬಯಲಾಟವು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ , ದಿನಾಂಕ 23-09-2018ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

– ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಯುವಕಮಂಡಲ(ರಿ.) ಇರಾ

IMG-20180721-WA0039.jpg