ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ‌ ಯುವಕ ಮಂಡಲದ 49ನೇ ವಾರ್ಷಿಕೋತ್ಸವ

ಯುವಕ ಮಂಡಲ (ರಿ.) ಇರಾ ಇದರ 49ನೇ‌ ವಾರ್ಷಿಕೋತ್ಸವ ದಿನಾಂಕ 25-12-2022 ರ ಭಾನುವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟದೊಂದಿಗೆ‌ ಸಂಪನ್ನವಾಯಿತು. ವಾರ್ಷಿಕೋತ್ಸವದ ಅಂಗವಾಗಿ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಿಕರಾದ ಶ್ರೀ ದಿವಾಣ ಗೋವಿಂದ ಭಟ್ ಮಾತನಾಡಿ ಯಕ್ಷಗಾನಕ್ಕೂ ಇರಾಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಬಹಳ ವಿಸ್ತೃತವಾಗಿ ವಿವರಿಸಿದರು.‌ನಂತರ ಮಾತನಾಡಿದ ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಿಕರಾದ ಶ್ರೀ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗು‌ ಯುವಕ‌ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ತಾಲೂಕು‌ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ ಯುವಕಮಂಡಲದ‌ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಯುವಕ‌ ಮಂಡಲದ ಸ್ಥಾಪಕ‌‌ ಸದಸ್ಯರಾದ ಶ್ರೀ ಗೋಪಾಲ ಮಾಸ್ಟರ್ ಕುಂಡಾವು, ಶ್ರೀ ಜನಾರ್ಧನ‌ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು. ಅತೀ ಹೆಚ್ಚು ‌ಅಂಕ ಗಳಿಸಿದ ಊರಿನ‌ ವಿದ್ಯಾರ್ಥಿಗಳಿಗೆ ‌ಪ್ರೊತ್ಸಾಹಧನ ನೀಡಲಾಯಿತು. ಯಕ್ಷಗಾನಕ್ಕೆ ಬೆನ್ನೆಲುಬಾಗಿ ನಿಂತು‌ ಸಂಘದ ‌ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ‌ ಪಾಲ್ಗೊಳ್ಳುವ ಸಂಘದ ಸದಸ್ಯರಾದ ಶ್ರೀ ಸ್ಟೀವನ್‌ ಡಿಸಿಲ್ವ ದೈವದಹಿತ್ಲು, ಶ್ರೀ ಅದ್ರಾಮ ಡಿ ಇವರನ್ನು ಗೌರವಿಸಲಾಯಿತು. ಸಂಧರ್ಭದಲ್ಲಿ ಉದ್ಯಮಿ, ಶ್ರೀ ಜಗದೀಶ ಆಳ್ವ ನಾರ್ಯಗುತ್ತು, ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು, ಶ್ರೀ ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ‌ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ‌ ಮಂಡಲದ‌ 49ನೇ ವಾರ್ಷಿಕೋತ್ಸವದ ಕರೆಯೋಲೆ

ಆತ್ಮೀಯರೇ

ಇದೇ ಬರುವ ತಾರೀಖು 25-12-2022 ರ ಭಾನುವಾರ ಯುವಕ ಮಂಡಲ ( ರಿ.) ಇರಾ ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು, ಸಂಜೆ 3.30 ಗಂಟೆಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಯುವಕ ಮಂಡಲದವರೆಗೆ ಮೇಳದ ದೇವರ ಭವ್ಯವಾದ ಮೆರವಣಿಗೆಯು ಸಾಗಲಿದ್ದು, ನಂತರ ಯುವಕ ಮಂಡಲದ ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಂತರ 5.30 ಕ್ಕೆ ಸರಿಯಾಗಿ ಚೌಕಿ ಪೂಜೆ , ಪ್ರಸಾದ ವಿತರಣೆ, 8.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿ ತನು-ಮನ-ಧನ ಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.

ಅಶ್ವಿತ್ ಕೊಟ್ಟಾರಿ
ಅಧ್ಯಕ್ಷರು
ಯುವಕ ಮಂಡಲ(ರಿ.) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲ(ರಿ.) ಇರಾ ಇದರ 48ನೇ ವಾರ್ಷಿಕೋತ್ಸವದ ಕರೆಯೋಲೆ

ಯುವಕ‌ ಮಂಡಲ(ರಿ.) ಇರಾ ಇದರ 48 ನೇ ವಾರ್ಷಿಕೋತ್ಸವ ಇದೇ ಬರುವ ತಾರಿಕು 11-12-2021ರಂದು ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು , ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ 7 ಗಂಟೆಗೆ ಯುವಕ‌ ಮಂಡಲದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಂತರ ಸಭಾ ಕಾರ್ಯಕ್ರಮದಲ್ಲಿ ಇರಾ ಗ್ರಾಮದ ಅರಸು ಕುರಿಯಾಡಿತ್ತಾಯಿ ದೈವದ ಅರಸುಕೊಡೆ ಚಾಕರಿಯವರಾದ ಶ್ರೀ ಜನಾರ್ಧನ ಸಪಲ್ಯ ಕೆಂಜಿಲ ಅವರಿಗೆ ಸನ್ಮಾನ ಜರಗಲಿರುವುದು. ಹಾಗೆಯೇ ಮಂಗಳೂರಿನ ಪ್ರಸಿದ್ದ ನಾಟಕ‌ ತಂಡ “ಲಕುಮಿ” ಯ ಕಲಾವಿದರಿಂದ ಪ್ರಸಿದ್ಧ ತುಳು ಹಾಸ್ಯಮಯ ನಾಟಕ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೆ ಸ್ವಾಗತ ಕೋರುವ ಯುವಕ‌ ಮಂಡಲ(ರಿ) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ‌‌ ಮಂಡಲದ 46 ನೇ ವಾರ್ಷಿಕೋತ್ಸವ

ಯುವಕ ಮಂಡಲ(ರಿ.) ಇರಾ ಇದರ 46 ನೇ ವಾರ್ಷಿಕೋತ್ಸವ ಡಿಸೆಂಬರ್ 15, 2019ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ ಇರಾ ಯುವಕ‌ ಮಂಡಲದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರೂ, ಮೊಕ್ತೇಸರರೂ ಅದ ಶ್ರೀ ಶಿವಾನಂದ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಇದರ ಜತೆಗೆ ಊರಿನ ಯುವ ಸಾಧಕರಾದ ಶ್ರೀ ನಿಶಿತ್ ಭಂಡಾರಿ, ಧನುಷ್ ಮತ್ತು ವರ್ಷಿತ್ ನೋಂಡರನ್ನು ಗೌರವಿಸಲಾಯಿತು. ಜತೆಗ ಊರಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ತಾಲೂಕ್ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಚಂದ್ರಹಾಸ್ ಕರ್ಕೇರ, ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಶ್ರೀ ರಾಧಾಕೃಷ್ಣ ರೈ ಉಮಿಯ, ಶ್ರೀನಿಧಿ ರೋಲಿಂಗ್ ಶಟರ್ ಸಂಸ್ಥೆಯ ಮಾಲಿಕರಾದ ಶ್ರೀ ಉದಯ ಕುಮಾರ್ ರೈ ಅಗರಿ, ಎ.ಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಶ್ರೀ ರಾಜೇಶ್ ರೈ ಅಗರಿ, ಯುವ ಉದ್ಯಮಿ ಸ್ಟೀಫನ್ ಪ್ರಕಾಶ್ ವೇಗಸ್ ,ಯುವಕ ಮಂಡಲದ ಅಧ್ಯಕ್ಷ ರಾದ ಶ್ರೀ ಚರಣ್ ಪಕ್ಕಳ, ಯುವಕ ಮಂಡಲದ ಸ್ಥಾಪಕ ಸದಸ್ಯರುಗಳಾದ ಶ್ರೀ ರಾಮಕೃಷ್ಣ ಸೂತ್ರಬೈಲು ಹಾಗು ಶ್ರೀ ಟಿ ಇಬ್ರಾಯಿ ಬ್ಯಾರಿ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ಯತಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ಕೊಟ್ಟಾರಿ ಅತಿಥಿಗಳನ್ನು ಸ್ವಾಗತಿಸಿದರು, ನಿತೇಶ್ ಶೆಟ್ಟಿ ಸಂಘದ ವಾರ್ಷಿಕ ವರದಿ ವಾಚಿಸಿದರು, ವರದರಾಜ ಎಂ ವಂದಿಸಿದರು‌. ಪುಷ್ಪರಾಜ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು ಹಾಗು ಅಶ್ವಿತ್ ಕೊಟ್ಟಾರಿ ಇರಾ ಯುವ ಸಾಧಕರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಕ ಮಂಡಲದ ಸದಸ್ಯರಿಂದ ಯಕ್ಷಗಾನ ನಾಟ್ಯ ವೈವಿದ್ಯ ನಡೆಯಿತು. ಜತೆಗ ಲಕುಮಿ ತಂಡದ ಪ್ರಸಿದ್ಧ ನಾಟಕ ಗುಟ್ಟು ಗೊತ್ತಾಂಡ್ ಪ್ರದರ್ಶನಗೊಂಡಿತು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲ(ರಿ) ಇರಾ ಇದರ ವಾರ್ಷಿಕೋತ್ಸವದ ಕರೆಯೋಲೆ

ಯುವಕ‌ ಮಂಡಲ(ರಿ.) ಇರಾ ಇದರ 46 ನೇ ವಾರ್ಷಿಕೋತ್ಸವ ಇದೇ ಬರುವ ತಾರಿಕು 15-12-2019ರಂದು ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು , ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ 7 ಗಂಟೆಗೆ ಯುವಕ‌ ಮಂಡಲದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಂತರ ಸಭಾ ಕಾರ್ಯಕ್ರಮದಲ್ಲಿ ಇರಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀಭಾ ವೇತನ ಜರಗಲಿದೆ. ಹಾಗೆಯೇ ಮಂಗಳೂರಿನ ಪ್ರಸಿದ್ದ ನಾಟಕ‌ ತಂಡ “ಲಕುಮಿ” ಯ ಕಲಾವಿದರಿಂದ ಪ್ರಸಿದ್ಧ ತುಳು ಹಾಸ್ಯಮಯ ನಾಟಕ “ಗುಟ್ಟು ಗೊತ್ತಾಂಡ್” ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೆ ಸ್ವಾಗತ ಕೋರುವ ಯುವಕ‌ ಮಂಡಲ(ರಿ) ಇರಾ

IMG-20191112-WA0006IMG-20191112-WA0005IMG-20191104-WA0000


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ತಾಳಿತ್ತಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ವಾರ್ಷಿಕೋತ್ಸವ

ಇರಾ ತಾಳಿತ್ತಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಇಂದು ಮಲಯಾಳಿ ಬಿಲ್ಲವ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್.ಡಿಸೋಝ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳೀಧರ ಭಂಡಾರಿ, ಶಿಕ್ಷಕ ಸಂಯೋಜಕಿ ಶ್ರೀಮತಿ ಸುಶೀಲಾ, ಇರಾ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಶ್ರೀ ಕ್ಷೇತ್ರ ಕದ್ರಿ ಮಾಜಿ ಟ್ರಸ್ಟಿ ಶ್ರೀಮತಿ ನಿವೇದಿತಾ.ಎನ್.ಶೆಟ್ಟಿ, ಗಣ್ಯರಾದ ಫ್ಲೋರಿನ್ ಡಿಸಿಲ್ವಾ, ಶ್ರೀಮತಿ ಚಂದ್ರಿಕಾ, ಪದ್ಮನಾಭ ರೈ ಮುಗುಳ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ‌ಶಿಕ್ಷಕಿ ಶಶಿ.ಬಿ ಸ್ವಾಗತಿಸಿ,ಶಿಕ್ಷಕಿ ಸುಮಂಗಳಾ ಶರ್ಮಾ ಧನ್ಯವಾದ ಸಲ್ಲಿಸಿದರು.ಶಿಕ್ಷಕ ಜಾನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು..

ಮಾಹಿತಿ: ಅಬ್ದುಲ್ ರಜಾಕ್ ಕುಕ್ಕಾಜೆ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ ಮಂಡಲದ ವಾರ್ಷಿಕೋತ್ಸವ

ಯುವಕ ಮಂಡಲ(ರಿ.) ಇರಾ ಇದರ 45 ನೇ ವಾರ್ಷಿಕೋತ್ಸವ ದಿನಾಂಕ 08-12-2018 ರ ಶನಿವಾರ ಯುವಕ ಮಂಡಲದ ವಠಾರರದಲ್ಲಿ ಯಶಸ್ವಿಯಾಗಿ ನಡೆಯಿತು.  ಕಾರ್ಯಕ್ರಮದ ಮೊದಲಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆವಹಿಸಿದ್ದರು, ಜತೆಗೆ ಅತಿಥಿಗಳಾಗಿ ಬಂಟ್ವಾಳ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಮೋಂತಿಮಾರ್ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಕಾಸ್ ಪುತ್ತೂರು, ಚಲನಚಿತ್ರ ನಿರ್ಮಾಪಕರಾದ ರವಿ ರೈ ಕಳಸ, ಲಕುಮಿ‌ ತಂಡದ‌ ಮಾಲಿಕರಾದ ಲ|ಕಿಶೋರ್ ಡಿ‌ ಶೆಟ್ಟಿ,  ಸಂಘಟನಾ ಪ್ರಮುಖರಾದ ಆನಂದ್ ಶೆಟ್ಟಿ ಅಡ್ಯಾರ್,  ಯುವಕ ಮಂಡಲದ ಸ್ಥಾಪಕ ಸದಸ್ಯರಾದ ವೆಂಕಪ್ಪ ಭಂಡಾರಿ, ಟಿ ಮೂಸಾ ಹಾಗು ಯುವಕ ಮಂಡಲದ ಪ್ರಸ್ತುತ ಅಧ್ಯಕ್ಷರಾದ ವಾಮನ ಡಿ ಉಪಸ್ಥಿತರಿದ್ದರು.  ಈ‌ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಹಾಗು ದೈವ ನರ್ತನಾ ಸೇವೆಯಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿದ ಶ್ರೀ ಲಕ್ಷ್ಮಣ ಯಾನೆ ಕಾಂತ ಕಣಂತೂರು ಅವರನ್ನು ಗೌರವಾಧರಗಳಿಂದ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಯುವಕ ಮಂಡಲದ ಕಿರಿಯ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತದನಂತರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ‌ “ಮಂಗೆ ಮಲ್ಪೊಡ್ಚಿ” ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಿತು.

ಛಾಯಾಚಿತ್ರ: ಅಪುಲ್‌ ಆಳ್ವ ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲದ ವಾರ್ಷಿಕೋತ್ಸವದ ಕರೆಯೋಲೆ

ಯುವಕ ಮಂಡಲ(ರಿ.)ಇರಾ ಇದರ 45 ನೇ ವಾರ್ಷಿಕೋತ್ಸವದ ಇದೇ ಬರುವ ತಾರೀಕು 08-12-2018, ಶನಿವಾರದಂದು ಇರಾ ಯುವಕ ಮಂಡಲದ ರಂಗ ಮಂದಿರದಲ್ಲಿ ನಡೆಯಲಿದ್ದು, ತಾವೆಲ್ಲರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಬೇಕಾಗಿ ವಿನಂತಿಸುವ,

ಅಧ್ಯಕ್ಷರು ಮತ್ತು ಸರ್ವಸದಸ್ಯರು,

ಯುವಕ ಮಂಡಲ(ರಿ.) ಇರಾ

IMG_20181204_084637